Pages

Sunday, July 3, 2011

ವ್ಯಾವಹಾರಿಕ ಯುಕ್ತಿ - ೨೩

ಕಾರ್ಯ ನಿರ್ವಹಣೆಯ ಅಳೆಯುವ
ಬಗೆಗಿನ ಚರ್ಚೆಯನ್ನು ಮುಂದುವರಿಸುತ್ತಾ ಇವತ್ತಿನ ಅಂಕಣದಲ್ಲಿ "ಅಳಿಯದೆ ಉಳಿಯುವುದರ" ಮೂಲಕ ಕಾರ್ಯ ನಿರ್ವಹಣೆಯನ್ನು ಅಳೆಯುವುದರ ಬಗ್ಗೆ ಚರ್ಚಿಸೋಣ.

ನಾವು ಕಾರ್ಯ ನಿರ್ವಹಣೆಯನ್ನು ಆರ್ಥಿಕ ಲಾಭದ ಅಳೆಯುವ ಕುರಿತು ಚರ್ಚಿಸುವಾಗ ಕಂಪನಿಯೊಂದು ಇತರ ಕಂಪನಿಗಳಿಗಿಂತ ಸ್ವಲ್ಪ ಹೆಚ್ಚಿನ ಸಮಯ ಉಳಿಯುವುದರ ಅರ್ಥ ಅದು ಸಾಮಾನ್ಯ ಕಾರ್ಯ ನಿರ್ವಹಣೆಯನ್ನಾದರೂ ಹೊಂದಿದೆ ಎಂದು ಅರ್ಥೈಸಬಹುದು. ಯಾವ ಕಂಪನಿ ಸಾಮಾನ್ಯ ನಿರ್ವಹಣೆಗಿಂತ ಕೆಳ ಮಟ್ಟದ ಕಾರ್ಯ ನಿರ್ವಹಣೆಯಿರುವ ಕಂಪನಿಗಳು ಹೆಚ್ಚಿನ ಸಮಯ ಉಳಿಯಲು ಸಾಧ್ಯವಾಗದು (ಸರ್ಕಾರದ ನೆರವು ಇರದ ಹೊರತು). ಹಾಗಾಗಿ ಅಳಿಯದೆ ಉಳಿಯುವುದು ಕಾರ್ಯ ನಿರ್ವಹಣೆಯ ಒಂದು ಅಳೆಯುವ ಸಾಧನವೆಂದು ಪರಿಗಣಿಸಬಹುದು.

ಈ ವಿಧಾನದ ಒಂದು ಹಿರಿಮೆಯೆಂದರೆ ಇದನ್ನು ಸುಲಭವಾಗಿ ಬಳಸಬಹುದು. ತುಂಬಾ ವಿಸ್ತಾರವಾದ ಕಂಪನಿಯ ಆರ್ಥಿಕತೆಯ ಬಗೆಗಿನ ಮಾಹಿತಿಯನ್ನು ಕಲೆಹಾಕುವ ಗೋಜಿಲ್ಲ. ಕಂಪನಿಯ ಮುನ್ನಡೆಯೇ ಅರಿಯಲು ಸಾಕು.

ಆದರೆ ಈ ವಿಧಾನದ ಕೊರತೆ ಎಂದರೆ
೧. ಒಂದು ಕಂಪನಿಯು ಅಸ್ಥಿತ್ವದಲ್ಲಿ ಇಲ್ಲ ಎನ್ನುವುದನ್ನು ನಿರ್ಧರಿಸುವುದು ಬಹಳ ತ್ರಾಸದಯಕವಾದುದು.
೨. ಕಂಪನಿಯ ನಿರ್ನಾಮಕ್ಕೆ ಬಹಳ ಸಮಯವನ್ನು ತೆಗೆದುಕೊಳ್ಳಬಹುದು.
೩. ಈ ಮಾರ್ಗವು ಕಂಪನಿಯ ಆಂತರಿಕ ಸಾಮಾನ್ಯ ಕಾರ್ಯ ನಿರ್ವಹಣೆಯ ಬಗೆಗೆ ಯಾವ ಸೂಚನೆಯನ್ನು ನೀಡದು.

No comments:

Post a Comment