ಈ ಹಿಂದಿನ ಅಂಕಣದಲ್ಲಿ ನಾವು ಲೆಕ್ಕ ಪತ್ರದ ಮುಖ್ಯ ಭಾಗಗಳ ಬಗ್ಗೆ ಸೂಕ್ಷ್ಮ ವಿವರಣೆ ನೀಡಿದೆವು. ಇನ್ನು ಮುಂದೆ ಇನ್ನು ವಿಶದವಾಗಿ ವಿವರಿಸುವೆವು.
ಒಬ್ಬ ವ್ಯವಸ್ಥಾಪಕರಾಗಿ, ಒಬ್ಬ ಹೂಡಿಕೆದಾರನು ಲೆಕ್ಕ ಪತ್ರವನ್ನು ನೋಡುವ ವಿಧಾನವನ್ನು ಅರಿತಿರುವುದು ಅತ್ಯಗತ್ಯ. ಹಾಗಾಗಿ ನಾವು ಅದನ್ನು ಇನ್ನು ಮುಂದೆ ಅರಿಯೋಣ.
ವ್ಯವಹಾರದಲ್ಲಿ "ಹಣವೇ ದೈವ". ಇದು ಅತ್ಯಂತ ಚಲನಶೀಲ ವಸ್ತು ಹಾಗಾಗಿ ರೂಪಾಂತರ ಬೇಗ ಮತ್ತು ಸುಲಭವಾಗಿ ಮಾಡಬಹುದು. ಉತ್ತಮ ಹಣದ ರಾಶಿ ಹೊಂದಿರುವ ಲೆಕ್ಕ ಪತ್ರವು ಅನೇಕ ಹೂಡಿಕೆದಾರರನ್ನು ಕಂಪನಿ ಎಡೆಗೆ ಆಕರ್ಷಿಸುವುದು. ಅವರು ಆರ್ಥಿಕ ದುರಂತದ ಸಮಯಗಳಲ್ಲಿ ಹಣವು ಕಂಪನಿಗೆ ರಕ್ಷಣೆಯನ್ನು ನೀಡಬಹುದು ಎಂದು ನಂಬುವರು, ಅಲ್ಲದೆ ಅಧಿಕ ಧನ ರಾಶಿಯು ಹೊಸ ಅವಕಾಶಗಳತ್ತ ಕಂಪನಿಯನ್ನು ಮುಂದೊಯ್ಯಲೂ ಕೂಡ ಸಾಧ್ಯವಾಗುವುದು.
ಸಾಮಾನ್ಯವಾಗಿ ನಿಯಮಿತವಾಗಿ ನಿರ್ವಹಿಸುತ್ತಿರುವ ಕಂಪನಿಯಲ್ಲಿ ಧನರಾಶಿಯು ಉತ್ತಮವಾಗಿಯೇ ಇರುವುದು. ಇದರರ್ಥ ಕಂಪನಿಯು ಉತ್ತಮವಾಗಿ ನಿರ್ವಹಿಸುತಿದ್ದು, ಮಾಲೀಕ ಸಮುದಾಯಕ್ಕೆ ಹಣವನ್ನು ಹೆಚ್ಚು ಉಪಯೋಗಿಸಲು ಸಮಯವೇ ಸಿಗುತ್ತಿಲ್ಲವೆಂದು! ಆದರೆ ಇದಕ್ಕೆ ವಿರುದ್ಧವಾಗಿ ಹಣದ ಕೊರತೆ ಎದ್ದು ಕಾಣುತ್ತಿದ್ದಲ್ಲಿ ಗಂಭಿರವಾದ ಸಮಸ್ಯೆ ಇದೆ ಎಂದು ಪರಿಗಣಿಸಬಹುದು.
ಧನರಾಶಿಯು ಹೆಚ್ಚಾಗುತ್ತ ಹಾಗೆಯೆ ಒಗ್ಗೂಡುತ್ತಿದ್ದರೆ ಅದು ಕಂಪನಿಯ ವ್ಯವಸ್ಥಾಪಕರುಗಳು ಸರಿಯಾಗಿ ಹಣವನ್ನು ಬಳಸಿಕೊಳ್ಳುತ್ತಿಲ್ಲ ಎಂದು ಅರ್ಥ. ಅಥವಾ ಉತ್ತಮ ಬಂಡವಾಳದ ಅವಕಾಶವಿರದ ಕಾರಣ ವ್ಯವಸ್ಥಾಪಕರುಗಳು ಹಣವನ್ನು ವಿನಿಯೋಗಿಸದೇ ಒಟ್ಟು ಗೂಡಿಸಲು ಬಿಟ್ಟಿರಬಹುದು.
ಆಂಗ್ಲ ಅಂಕಣ
http://somanagement.blogspot.com/2011/07/finance-and-management-7.html
http://somanagement.blogspot.com/2011/07/finance-and-management-7.html
No comments:
Post a Comment