Wednesday, July 20, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೫

ಹಿಂದಿನ ಅಂಕಣದಲ್ಲಿ
ಚಾಲ್ತಿಯ ಆಸ್ತಿ ಮತ್ತು ಚಾಲ್ತಿಯ ಬಾಧ್ಯತೆ ಗಳ ಬಗ್ಗೆ ಚರ್ಚಿಸಿದೆವು.ಇಂದು ಲೆಕ್ಕ ಪತ್ರದ ಇತರ ವಿಭಾಗಗಳ ಬಗ್ಗೆ ನೋಡೋಣ.

ಈ ಹಿಂದಿನ ಅಂಕಣದಲ್ಲಿ ನಾವು ಇವುಗಳನ್ನು ಚಾಲ್ತಿಯ ಎಂದೇಕೆ ಕರೆಯುವರು ಎಂದೂ ಕೂಡ ಅರಿತೆವು. ಹೀಗಾಗಿ ಯಾವ ವಿಭಾಗ ಚಾಲ್ತಿಯ ಒಳಗೆ ಬರುವುದಿಲ್ಲವೋ ಅವುಗಳನ್ನು ಸಾಮಾನ್ಯವಾಗಿ ಧೀರ್ಘ ಕಾಲೀನದೊಳಗೆಂದು ಅರ್ಥೈಸಬಹುದು. ಇವುಗಳನ್ನು ಏನೆಂದು ಕರೆಯುವರು?

ನಾವು ಲೆಕ್ಕ ಪತ್ರದ ಆಸ್ತಿಯ ಭಾಗದೆಡೆಗೆ ಗಮನಿಸಿದರೆ ಯಾವುದು ಒಂದು ವ್ಯಾವಹಾರಿಕ ಅವಧಿಯಲ್ಲಿ ಬದಲಾವಣೆ ಹೊಂದುವುದಿಲ್ಲವೋ ಅವು ಸಾಮಾನ್ಯವಾಗಿ ಕಟ್ಟಡಗಳು, ಪೀಠ-ಉಪಕರಣಗಳು, ಯಂತ್ರೋಪಕರಣಗಳು ಇತ್ಯಾದಿ. ಇವುಗಳನ್ನು ಸ್ಥಿರಾಸ್ತಿಗಳು ಎನ್ನುವರು.

ಇನ್ನು ಆರ್ಥಿಕ ಬಾಧ್ಯತೆಯ ಬದಿಯಲ್ಲಿ ಧೀರ್ಘ ಕಾಲೀನದೊಳಗೆ ಬರುವ ಅಂಶಗಳನ್ನು ಇನ್ನು ಎರಡು ಭಾಗಗಳನ್ನಾಗಿ ವಿಭಾಗಿಸಬಹುದು. ದೀರ್ಘಾವಧಿಯ ಸಾಲ ಎರಡನೆಯದು ಮಾಲಿಕರ ಬಂಡವಾಳ.ಹೀಗೆ ನಾವು ಸಾಮಾನ್ಯವಾಗಿ ಎರಡು ಉಪ ವಿಭಾಗಗಳ ಅಡಿಯಲ್ಲಿ ಹೇಳಬಹುದು. ಅವೇ ದೀರ್ಘ ಕಾಲೀನ ಬಾಧ್ಯತೆ (Long Term Liability) ಮತ್ತು ಮಾಲೀಕರ ಬಂಡವಾಳ. (Owner's Equity)

ಇದನ್ನೇ ನಾವು ಲೆಕ್ಕ ಪತ್ರದಲ್ಲಿ ಹೀಗೆ ತೋರಿಸಬಹುದು.

ಆಂಗ್ಲ ಅಂಕಣ:
http://somanagement.blogspot.com/2011/07/finance-and-management-5-in-earlier.html

No comments:

Post a Comment