Wednesday, August 10, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೧೬

ಈ ಹಿಂದಿನ ಅಂಕಣದಲ್ಲಿ ನಾವು ಹಣದ ಅನುಪಾತ, ಅದರ ಉಪಯೋಗ ಮತ್ತು ಮಿತಿಗಳ ಕುರಿತು ಚರ್ಚಿಸಿದೆವು. ಈ ಅಂಕಣದಿಂದ ನಾವು ಸ್ವಲ್ಪ ಹಣಕಾಸಿನ ಬಗೆಗಿನ ಅಧ್ಯಯನದಿಂದ ದೂರ ಸರಿದು ಕೆಲವೊಂದು ವ್ಯವಹಾರ ಜಗತ್ತಿನ ಹಣಕಾಸಿನ ಪದಗಳನ್ನು ಅರಿಯೋಣ. ಈ ಮೂಲಕ ಹಣಕಾಸಿನ ಜಗತ್ತಿನ ಬಗ್ಗೆ ಮತ್ತು ಇವುಗಳು ಹೇಗೆ ವಾವಹಾರಿಕ ವ್ಯವಸ್ಥೆಯಲ್ಲಿ ಹೇಗೆ ಅನ್ವಯವಾಗುವುದು ಎಂದು ಅರಿಯೋಣ.

ಇಲ್ಲಿಯವರೆಗೆ ನಾವು "ಶೇರ್ ಕ್ಯಾಪಿಟಲ್" ಎಂಬ ಪದವನ್ನು ಬಹಳ ಬಾರಿ ಉಪಯೋಗಿಸಿದೆವು. ಇದರ ಬಗ್ಗೆ ಇನ್ನು ಹತ್ತಿರದಿಂದ ಈ ಮುಂದಿನ ಅಂಕಣಗಳಲ್ಲಿ ಗಮನಿಸೋಣ. ಶೇರ್ ಕ್ಯಾಪಿಟಲ್ ವಿಭಾಗವು ಶೇರ್, ಅವುಗಳ ಮುಖ ಬೆಲೆ, ಅಧಿಕೃತವಾದ ಶೇರ್ ಗಳು ಮತ್ತು ಕೊಟ್ಟ ಶೇರ್ ಗಳ ಬಗ್ಗೆ ಮಾಹಿತಿಯನ್ನು ನೀಡುವುದು.

ಕಂಪನಿಯ ಕ್ಯಾಪಿಟಲ್ ಸ್ಟಾಕ್ ನ್ನು "ಕ್ಯಾಪಿಟಲ್ ಸ್ಟಾಕ್ ನ ಶೇರ್" ಅಥವಾ ಸಾಮಾನ್ಯವಾಗಿ "ಶೇರ್" ಗಳಾಗಿ ವಿಭಾಜಿಸುವರು. ಕಂಪನಿಯ ಶೇರ್ ಹೊಂದಿರುವ ವ್ಯಕ್ತಿಯು ಶೇರ್ ಪ್ರಮಾಣ ಪತ್ರವನ್ನು ಹೊಂದಿರುತ್ತಾನೆ. ಒಂದು ಮಾದರಿ ಶೇರ್ ಪ್ರಮಾಣ ಪತ್ರವು ಯಾವ ರೀತಿಯ ಶೇರ್, ಶೇರ್ ಗಳ ಸಂಖ್ಯೆ ಜೊತೆಗೆ ಪ್ರತಿಯೊಂದು ಶೇರ್ ನ ಕ್ರಮ ಸಂಖ್ಯೆಗಳನ್ನು ಹೊಂದಿರುತ್ತದೆ. ಈ ಶೇರ್ ಗಳಲ್ಲಿ ಕಂಪನಿ ಸೆಕ್ರೆಟರಿ ಯ ಸಹಿ ಮತ್ತು ಕಂಪನಿಯ ಅಧಿಕೃತ ಸೀಲ್ ಇರುವುದು.

ಶೇರ್ ನ ಮಾಲೀಕ ಒಬ್ಬನೇ ಇದ್ದಲ್ಲಿ ಈ ಮೇಲಿನ ರೀತಿಯ ಪತ್ರ ಹೊಂದಿರುವುದು ಸಮರ್ಪಕವಾಗುವುದು. ಆದರೆ ಒಂದು ವೇಳೆ ಮಾಲೀಕನು ತನ್ನಲ್ಲಿರುವ ಶೇರ್ ಗಳನ್ನೂ ಬೇರೆಯವರಿಗೆ ಮಾರಲು ಬಯಸಿದಾಗ ವರ್ಗಾವಣೆ ಅರ್ಜಿಯ ಮೂಲಕ ಮಾಡಬಹುದು. ಶೇರ್ ಮಾಲೀಕ ಶೇರ್ ಗಳೊಂದಿಗೆ ವರ್ಗಾವಣೆ ಅರ್ಜಿಯನ್ನು ಕಂಪನಿಗೆ, ಕಂಪನಿಯು ವರ್ಗಾವಣೆಯನ್ನು ದಾಖಲಿಸಲು ಕಳಿಸಬೇಕು.

ಈ ವಿಧಾನದ ಮೂಲಕ ಶೇರ್ ನ ಮಾಲೀಕತ್ವದ ವರ್ಗಾವಣೆ ಬಹಳ ಸಮಯವನ್ನು ತೆಗೆದು ಕೊಳ್ಳುವುದು, ಅದರಲ್ಲೂ ಕಂಪನಿಯು ದೊಡ್ಡದಾಗಿದ್ದು ಸಾವಿರಾರು ಶೇರ್ ಗಳಿದ್ದಲ್ಲಿ ಈ ವಿಧಾನದ ಮೂಲಕ ಶೇರ್ ವ್ಯವಹಾರ ಮಾಡುವುದು ಕಂಪನಿಯು ಈ ವಿಧಾನಕ್ಕೆ ತನ್ನದೇ ದಾರಿಯನ್ನು ಹೊಂದಿದ್ದರೂ ಕೂಡ ಸಮಯವು ವ್ಯಯವಾಗುವುದು ನಿಶ್ಚಿತ. ಹೀಗಾಗಿಯೇ ಎಲೆಕ್ಟ್ರೋನಿಕ್ ರೂಪದ ಶೇರ್ ಗಳನ್ನು ಬಳಸುವುದು ಸೂಕ್ತ. ಈ ರೀತಿ ಎಲೆಕ್ಟ್ರೋನಿಕಿಕರಣ ಗೊಂಡ ಶೇರ್ ಗಳನ್ನು ಡಿ-ಮ್ಯಾಟ್ ಶೇರ್ ಗಳೆನ್ನುವರು.

ಆಂಗ್ಲ ಅಂಕಣ:
http://somanagement.blogspot.com/2011/07/so-management.html


No comments:

Post a Comment