ಈ ಹಿಂದಿನ ಅಂಕಣದಲ್ಲಿ ಕ್ಯಾಪಿಟಲ್ ಸ್ಟಾಕ್ ನೊಂದಿಗೆ ಆರಂಭಿಸಿದೆವು. ಇಂದು ನಾವು ಇದೆ ವಿಭಾಗದ ಚರ್ಚೆಯನ್ನು ಮುಂದುವರಿಸುತ್ತಾ ಅಧಿಕೃತ ಕ್ಯಾಪಿಟಲ್ ನ್ನು ವಿಷಯವಾಗಿ ಸ್ವೀಕರಿಸೋಣ.
ಕ್ಯಾಪಿಟಲ್ ನ್ನು ತುಂಬಿಕೊಳ್ಳ ಹೊರಟ ಒಂದು ಕಂಪನಿಯು ಅದನ್ನು ತನ್ನ ಇಕ್ವಿಟಿ ಇಂದ ಪಡೆಯಬಹುದು. ಸಾಮಾನ್ಯವಾಗಿ ಕಂಪನಿಯು ತನ್ನ ಇಕ್ವಿಟಿ ಶೇರ್ ಗಳನ್ನು ನೀಡಲು ಅಧಿಕಾರವನ್ನು ಹೊಂದಿರುತ್ತದೆ. ಇದಕ್ಕೆ ಮೊದಲ ಹಕ್ಕಿನ ಶೇರ್ ಗಳು ಎಂದು ಕರೆಯುವರು. ಇಕ್ವಿಟಿ ಕ್ಯಾಪಿಟಲ್ ಕೇವಲ ಕಂಪನಿಯ ಉಳಿದ ಇಕ್ವಿಟಿ ಯಾಗಿರುತ್ತದೆ. ಏಕೆಂದರೆ ಇಕ್ವಿಟಿ ಶೇರ್ ಮಾಲಿಕರು ಎಲ್ಲ ಖರ್ಚುಗಳನ್ನು ಸಂದಾಯ ಮಾಡಿದ ಮೇಲೆ ಸಂದಾಯಿಸಲ್ಪಡುವರು. ಇಕ್ವಿಟಿ ಶೇರ್ ಮಾಲೀಕರು ಕಂಪನಿಯ ನೈಜ ಮಾಲಿಕರ ಸಮಾನರು, ಹಾಗಾಗಿ ಅವರಿಗೆ ಕಂಪನಿಯ ನಿರ್ದೇಶಕರಗಳು ಮತ್ತು ಡಿವಿಡೆಂಡ್ ಗಳನ್ನು ನಿರ್ಧರಿಸುವ ಅಧಿಕಾರವಿರುವುದು.
ಕಂಪನಿಯ ಬಹು ಮಟ್ಟಿನ ಸಂವಿಧಾನವು ಕಂಪನಿಯ MOA (Memorandum of Association) ದಿಂದ ಆಳಲ್ಪಟ್ಟಿರುತ್ತದೆ. ಇದರಲ್ಲಿ ಸ್ಟಾಕ್ ನ ಎಷ್ಟು ಶೇರ್ ಗಳನ್ನು ಬಿಡುಗಡೆ ಮಾಡಬಹುದು ಮತ್ತು ಅವುಗಳ ಮುಖ ಬೆಲೆಯನ್ನು ನಿಗದಿಯಾಗಿರುತ್ತದೆ. ಈ ಸಂಖ್ಯೆಯನ್ನು ಅಧಿಕೃತ ಕ್ಯಾಪಿಟಲ್ ಎಂದು ಕರೆಯುವರು.
ಕಂಪನಿಯು ಅಧಿಕೃತ ಕ್ಯಾಪಿಟಲ್ ನ್ನು ಹೆಚ್ಚಿಸಲು ಸದ್ಯದ ಶೇರ್ ಮಾಲೀಕರ ಅನುಮತಿ ಪಡೆಯುವುದು ಅತ್ಯಗತ್ಯ, ಆದರೆ ಈ ಪ್ರಕ್ರಿಯೆ ಸಮಯವನ್ನು ತೆಗೆದುಕೊಳ್ಳುವುದು, ಹಾಗಾಗಿ ಕಂಪನಿಗಳು ಮೊದಲು ಯೋಜಿಸಿದ ಬಿಡುಗಡೆ ಮಾಡಬೇಕಾದ ಶೇರ್ ಗಳಿಗಿಂತ ಹೆಚ್ಚಿನ ಶೇರ್ ಗಳಿಗೆ ಅಧಿಕಾರವನ್ನು ಪಡೆದುಕೊಂಡಿರುತ್ತದೆ. ಈ ರೀತಿಯಾಗಿ ಮುಂದೆ ಹಣದ ಅಗತ್ಯವಿದ್ದಲ್ಲಿ ಹೆಚ್ಚಿನ ಶೇರ್ ಗಳನ್ನು ಬಿಡುಗಡೆ ಮಾಡಬಹುದು.
ಆಂಗ್ಲ ಅಂಕಣ:
http://somanagement.blogspot.com/2011/07/so-management_26.html
No comments:
Post a Comment