Pages

Thursday, August 11, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೨೨

ಹಿಂದಿನ ಅಂಕಣದಲ್ಲಿ ನಾವು ಪ್ರಾಶಸ್ತ್ಯದ ಶೇರ್ ಗಳ ಬಗ್ಗೆ ನೋಡಿದೆವು ಹಾಗು ಅವುಗಳ ವಿವಿಧ ಪ್ರಕಾರಗಳನ್ನು ಪಟ್ಟಿ ಮಾಡಿದೆವು. ಇಂದಿನ ಅಂಕಣದಲ್ಲಿ ವಿವಿಧ ಪ್ರಕಾರದ ಪ್ರಾಶಸ್ತ್ಯದ ಶೇರ್ ಗಳ ಬಗ್ಗೆ ಇನ್ನು ಹೆಚ್ಚು ಅರಿಯೋಣ.

Cumulative and Non-Cumulative Preference shares:
Cummulative
ಶೇರ್ ಗಳು ಶೇರ್ ದಾರನಿಗೆ ಡಿವಿಡೆಂಡ್ ನೀಡದ ಹಿಂದಿನ ವರ್ಷದ ಅಥವಾ ಹಿಂದಿನ ಕೆಲವು ವರ್ಷಗಳ ಡಿವಿಡೆಂಡ್ ಅನ್ನು ಪಡೆಯುವ ಹಕ್ಕನ್ನು ನೀಡುವುದು. ಈ ರೀತಿಯ ಪ್ರಾಶಸ್ತ್ಯದ ಶೇರ್ ಗಳಿಗೆ ಪ್ರಾಶಸ್ತ್ಯದ ಡಿವಿಡೆಂಡ್ ಗಳನ್ನು ಘೋಷಿಸದೆ ಇರುವ ಡಿವಿಡೆಂಡ್ ನ್ನು dividends in ಅರ್ರೆಅರ್ಸ್ ಎಂದು ಕರೆಯುವರು. ಈ ರೀತಿಯ ಡಿವಿಡೆಂಡ್ ಗಳನ್ನು ಬಾಧ್ಯತೆ (liability) ಎಂದು ಪರಿಗಣಿಸಲಾಗದು. ಏಕೆಂದರೆ ಡಿವಿಡೆಂಡ್ ನ್ನು ಘೋಷಿಸಿರುವುದಿಲ್ಲ.

Participating and Non-participating Preference Shares:
Participating ಶೇರ್ ದಾರರು ಇಕ್ವಿಟಿ ಶೇರ್ ದಾರರಿಗೆ ನಿರ್ದಿಷ್ಟ ಡಿವಿಡೆಂಡ್ ಕೊಟ್ಟ ಮೇಲೆ, ಕಂಪನಿಯ ಲಾಭದಲ್ಲಿ ಪಾಲು ಪಡೆಯುವಹಕ್ಕನ್ನು ಹೊಂದಿರುವರು. ಇದರ ಜೊತೆಗೆ ಶೇರ್ ನ ಮುಖ ಬೆಲೆಯ ಮೇಲಿನ ಕಂಪನಿಯ ಆಸ್ತಿಯಲ್ಲಿಯೂ ಕೂಡ ಪಾಲನ್ನು ಹೊಂದಲು ಅಧಿಕಾರ ಹೊಂದಿರುವರು. Non-participating Preference Shares ಶೇರ್ ದಾರರು ಕೇವಲ ನಿರ್ಧಾರಿತ ಡಿವಿಡೆಂಡ್ ಪಡೆಯಲು ಮಾತ್ರ ಅರ್ಹರು, ಅವರಿಗೆ ಇಕ್ವಿಟಿ ಡಿವಿಡೆಂಡ್ ಕೊಟ್ಟ ಮೇಲೆ ಉಳಿಯುವುದರಲ್ಲಿ ಪಾಲು ಇರುವುದಿಲ್ಲ.

ಉಳಿದೆರಡು ಪ್ರಾಶಸ್ತ್ಯದ ಶೇರ್ ಗಳ ಬಗ್ಗೆ ಮುಂದಿನ ಅಂಕಣದಲ್ಲಿ ನೋಡೋಣ.

ಆಂಗ್ಲ ಅಂಕಣ:
http://somanagement.blogspot.com/2011/08/finance-and-management-22.html

No comments:

Post a Comment