Pages

Wednesday, August 17, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೨೪

ಈ ಹಿಂದಿನ ಅಂಕಣದಲ್ಲಿ ನಾವು ಬಿಡಿಸಿ ಕೊಳ್ಳಬಹುದಾದ ಮತ್ತು ಬದಲಾಯಿಸಬಹುದಾದ ಪ್ರಾಶಸ್ತ್ಯದ ಶೇರ್ ಗಳ ಬಗ್ಗೆ ನೋಡಿದೆವು. ಇಂದು ನಾವು ಕಾದಿಟ್ಟ ಹಣ (reserve) ನ ವಿಚಾರದ ಬಗ್ಗೆ ಅರಿಯೋಣ.

ನಾವು ಸಾಮಾನ್ಯವಾಗಿ reserve ನ್ನು ಬ್ಯಾಲೆನ್ಸ್ ಶೀಟ್ ನಲ್ಲಿ surplus ನೊಡನೆ ಒಟ್ಟಿಗೆ "reserve & surplus" ನ ಒಳಗೆ ಇರುವುದನ್ನು ನೋಡುತ್ತೇವೆ. ಈ ವಿಭಾಗವು ಎಲ್ಲೂ ಬಳಸದೆ ಇಟ್ಟ ಲಾಭಾಂಶ ಮತ್ತು ಇತರ ಸಂಪಾದಿಸದಿರುವುವುಗಳನ್ನು ಒಳಗೊಂಡಿರುತ್ತದೆ. ಅನೇಕ ಪ್ರಕಾರದ reserve ಗಳಿವೆ. ಅವುಗಳಲ್ಲಿ ಕೆಲವನ್ನು ಈ ಕೆಳಗೆ ವಿವರಿಸಲಾಗಿದೆ.

ಕ್ಯಾಪಿಟಲ್ ರೆಸೆರ್ವ್: ಕಂಪನಿಯು ತನ್ನ ಶೇರ್ ದಾರರಿಗೆ ಡಿವಿಡೆಂಡ್ ಪಾವತಿ ಮಾಡಲು ಆಗದ ರೆಸೆರ್ವ್ ಇದಾಗಿದೆ.
ಆದಾಯದ ರೆಸೆರ್ವ್ ಅಥವಾ ಫ್ರೀ ರೆಸೆರ್ವ್: ಕಂಪನಿಯ ವ್ಯವಹಾರದಿಂದ ಉತ್ಪತ್ತಿಯಾದ ಮತ್ತು ಶೇರ್ ದಾರರಿಗೆ ಡಿವಿಡೆಂಡ್ ರೂಪದಲ್ಲಿ ನೀಡಲು ಸಾಧ್ಯವಗುವಂತದು.
ಕಾನೂನು ಬದ್ಧ ರೆಸೆರ್ವ್: ಗಳನ್ನು ಕಾನೂನಿಗೆ ಅನುಗಣವಾಗಿ ಕಂಪನಿಯು ಸೃಷ್ಟಿ ಮಾಡಿರುವಂತದು.
realised ರೆಸೆರ್ವ್: ಎಕ್ಸ್ ಚೇಂಜ್ ವ್ಯವಹಾರದಲ್ಲಿ ಪಡೆದ ಆಸ್ತಿ ಅಥವಾ ಹಣ.
Unrealized ರೆಸೆರ್ವ್: ಎಕ್ಸ್ ಚೇಂಜ್ ವ್ಯವಹಾರವಲ್ಲದೆ ಇತರ ಅಕೌಂಟಿನ ಎಂಟ್ರಿಯ ಮೂಲಕ ಸೃಷ್ಟಿಯಾದುದು.

ಇವುಗಳಲ್ಲಿ ಕೆಲವುಗಳ ಬಗ್ಗೆ ಮುಂದೆ ಚರ್ಚಿಸೋಣ.

No comments:

Post a Comment