Wednesday, August 10, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೧೯

ಹಿಂದಿನ ಅಂಕಣದಲ್ಲಿ ನಾವು ಸಂದಾಯ ಹೊಂದಿದ ಕ್ಯಾಪಿಟಲ್ ಮತ್ತಿನ್ನಿತರ ವಿಚಾರಗಳ ಬಗ್ಗೆ ಅರಿತೆವು. ಈ ಅಂಕಣದಲ್ಲಿ ನಾವು ಮುಖ ಬೆಲೆಯ ಬಗ್ಗೆ ಅರಿಯುವ ಯತ್ನ ಮಾಡೋಣ.

ಮುಖ ಬೆಲೆ: ಹೆಸರೇ ಸೂಚಿಸುವಂತೆ ಇದು ಶೇರ್ ನ ಮುಖ ಬೆಲೆ. ಇದು ಶೇರ್ ದಾರನು ಪ್ರತಿ ಶೇರ್ ಗೆ ಕೊಡಬೇಕಾದ ಕನಿಷ್ಟತಮ ಮೌಲ್ಯವನ್ನು ಹೇಳುವುದು. ಇದು ಕಂಪನಿಯ ಕಾನೂನು ಬದ್ಧ ಕನಿಷ್ಟತಮ ಕ್ಯಾಪಿಟಲ್. ಒಂದು ವೇಳೆ ಕಂಪನಿಯು ದಿವಾಳಿ ಎಂದು ಘೋಷಿಸಲ್ಪಟ್ಟರೆ ಮತ್ತು ಶೇರ್ ದಾರರು ಸಾಲವನ್ನು ತೀರಿಸಬೇಕಾಗಿ ಬಂದರೆ ಪ್ರತಿಯೊಬ್ಬ ಶೇರ್ ದಾರನನ್ನು ಅವನು/ಳು ಹೊಂದಿದ ಶೇರ್ ಗಳ ಒಟ್ಟು ಮುಖ ಬೆಲೆಯನ್ನು ನೀಡಲು ಒತ್ತಾಯಿಸಬಹುದು.

ಕಂಪನಿಗಳು ಕನಿಷ್ಟತಮ ಕ್ಯಾಪಿಟಲ್ ನ ಯಾವುದೇ ಭಾಗವನ್ನು ಹಿಂದಿರುಗಿಸಲು ನಿಷಿದ್ಧವಾಗಿದೆ. ಕೇವಲ ಒಂದು ವಿಶಿಷ್ಟವಾದ ವಿಧಾನದ ಮೂಲಕ ಮಾತ್ರ ಇದು ಸಾಧ್ಯ; ಇದನ್ನು ಕಂಪನಿಯು ಹಣ ನೀಡಬೇಕಾದವರ ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿದೆ. ಇಲ್ಲವಾದಲ್ಲಿ ಶೇರ್ ದಾರರು ಕಂಪನಿಯ ಎಲ್ಲ ಆಸ್ತಿಗಳನ್ನು ಹಿಂಪಡೆದು ಕೊಂಡು ಹಣ ನೀಡಬೇಕಾದವರಿಗೆ ಏನೂ ಉಳಿಯದಂತೆ ಮಾಡಬಹುದು!!

ಆಂಗ್ಲ ಅಂಕಣ:
http://somanagement.blogspot.com/2011/07/finance-and-management-19.html

No comments:

Post a Comment