ಈ ಹಿಂದಿನ ಅಂಕಣದಲ್ಲಿ ನಾವು ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ಗಳ ನಡುವಿನ ಸಂಬಂಧಗಳ ಬಗ್ಗೆ ಚರ್ಚಿಸಿದೆವು. ಇಂದಿನ ಅಂಕಣದಲ್ಲಿ ಪ್ರಾಫಿಟ್ & ಲಾಸ್ ನಲ್ಲಿನ ವಿವಿಧ ವಿಭಾಗಗಳತ್ತ ಗಮನ ಹರಿಸೋಣ. ಇವತ್ತು ನಾವು Depreciation ನ ಬಗ್ಗೆ ಅರಿಯೋಣ.
ನಾವೊಂದು ವಸ್ತುವನ್ನು ಖರೀದಿಸಿದಾಗ (ಕಂಪ್ಯೂಟರ್ ಟೇಬಲ್) ಈ ಕೆಳಗಿನ ಸಮೀಕರಣವು ಸ್ವಾಭಾವಿಕವಾಗಿ ಅನ್ವಯವಾಗುತ್ತದೆ.
ವಸ್ತುವಿನ ಬೆಲೆ = ತೆತ್ತ ಹಣ.
ಈಗ ನಾವಿದನ್ನು ಬ್ಯಾಲೆನ್ಸ್ ಶೀಟ್ ನಲ್ಲಿ ಹಾಕಿದಾಗ, ಅಸ್ಸೆಟ್ ನ ಕೆಳಗೆ ಕಂಪ್ಯೂಟರ್ ಟೇಬಲ್ ನ ಬೆಲೆ ಜೋಡಿಸಲ್ಪದುತ್ತದೆ, ಹಾಗೆ ಲಯಬಿಲಿಟಿ ಕಡೆಯಿಂದ ಕ್ಯಾಶ್ ನಲ್ಲಿ ಅಷ್ಟೇ ಮೊತ್ತವು ಕಡಿಮೆಯಾಗುತ್ತದೆ. ಇದು ಇಂದು ನಾವು ಖರೀದಿಸಿದಾಗ ಹೀಗೆ ಇರುವುದು. ಆದರೆ ಒಂದು ವರ್ಷದ ನಂತರ ಚಿತ್ರಣವು ಹೇಗೆ ಇರುವುದು? ಇದೊಂದು ತೀರ ಸೂಕ್ಷ್ಮವಾದ ಪ್ರಶ್ನೆ, ಯಾಕೆಂದರೆ ಅಷ್ಟರೊಳಗೆ ಟೇಬಲ್ ನ ಅವಸ್ಥೆ ಏನು ಬೇಕಾದರೂ ಆಗಿರಬಹುದು. (ಕೇವಲ ಟೇಬಲ್ ನ ಬಗ್ಗೆ ಮಾತ್ರ ಯೋಚಿಸೋಣ, ಅದಕ್ಕೆ ನೀಡಿದ ಹಣವು ಟೇಬಲ್ ಆಗಿ ಬದಲಾಗಿದೆಯಾದ್ದರಿಂದ ಹಣದ ಬಗ್ಗೆ ಯೋಚಿಸುವುದು ಬೇಡ)
ಈ ವರ್ಷದಲ್ಲಿ ಆ ಟೇಬಲ್ ನ ಕಾಲು ಮುರಿದು ಹೋಗಿರಬಹುದು, ಅದನ್ನು ಗುಜರಿಗೆ ಎಸೆದಿರಬಹುದು, ಅದನ್ನು ಮಾರಿರಬಹುದು, ಇಲ್ಲವೇ ಅದು ಇನ್ನು ಆಫೀಸ್ ನಲ್ಲಿ ಉಪಯೋಗಿಸಲ್ಪಡುತ್ತಿರಬಹುದು. ಇದ್ಯಾವುದೇ ಆಗಿದ್ದರು ಕಂಪ್ಯೂಟರ್ ಟೇಬಲ್ ನ ಬೆಲೆಯು ಅದನ್ನು ಖರೀದಿಸಿದ ಬೆಲೆಯಂತು ಆಗಿರಲಾರದು. ಅದು ಅದಕ್ಕಿಂದ ಕಡಿಮೆಯಾಗಿರುತ್ತದೆ. ವರ್ಷಗಳು ಕಳೆದಂತೆ ಅದರ ಮರು ಮಾರಾಟದ ಬೆಲೆ ಕಡಿಮೆಯಾಗುತ್ತ ಹೋಗುವುದು. ಇದನ್ನು ಅಕೌಂಟ್ ನ ಜಗತ್ತಿನಲ್ಲಿಯೂ ಪರಿಗಣಿಸುವರು, ಈ ಪ್ರಕ್ರಿಯೆಯನ್ನು Depriciation ಎಂದು ಕರೆಯುವರು.
ಹಾಗಾಗಿ depreciation ನನ್ನು ಭೌತಿಕ ಆಸ್ತಿಯ (tanglible asset) ಬೆಲೆಯನ್ನು ಅದರ ಉಪಯುಕ್ತತೆಯ ಸಮಯದವರೆಗೆ ನೀಡುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಬಹುದು. ವ್ಯವಹಾರ ಜಗತ್ತಿನಲ್ಲಿ ಎಲ್ಲ ಚರಾಸ್ತಿಗಳನ್ನು ತೆರಿಗೆ ಮತ್ತು ಅಕೌಂಟ್ ನ ಉಪಯೋಗಕ್ಕೆ Depreciation ಮಾಡುವರು.
ಆಂಗ್ಲ ಅಂಕಣ:
http://somanagement.blogspot.com/2011/08/finance-and-management-30.html
No comments:
Post a Comment