Friday, September 16, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೨೯

ಈ ಹಿಂದಿನ ಅಂಕಣದಲ್ಲಿ appropiation ಬಗ್ಗೆ ಚರ್ಚಿಸಿದೆವು. ನಾವು ಬ್ಯಾಲೆನ್ಸ್ ಶೀಟ್ ನಲ್ಲಿನ ವಿಭಾಗ ಗಳ ಬಗ್ಗೆ ಆಳವಾಗಿ ನೋಡಿದೆವು. ಈಗ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ನ ನಡುವಿನ ಸಂಬಂಧವನ್ನು ಅರಿಯಲು ಸರಿಯಾದ ಸಮಯವೆಂದು ಅದರ ಬಗ್ಗೆ ಶುರು ಮಾಡೋಣ.

ಪ್ರಾಫಿಟ್ & ಲಾಸ್ ಬಗ್ಗೆ ಅರಿಯಲು ಹೆಚ್ಚಿನ ವಿವರಣೆಯ ಅಗತ್ಯವಿಲ್ಲವೆಂದು ನಮ್ಮ ಅಂಬೋಣ. ನಾವು ಈಗ ನೇರವಾಗಿ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ನ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚಿಸಲು ಶುರು ಮಾಡೋಣ.

ಬ್ಯಾಲೆನ್ಸ್ ಶೀಟ್ ಕಂಪನಿಯ ಆಗಿನ ಒಳಗಿನ ಚಿತ್ರಣ ವನ್ನು ನೀಡುತ್ತದೆ. ಇವತ್ತು ಬ್ಯಾಲೆನ್ಸ್ ಶೀಟ್ ನಲ್ಲಿರುವುದು ನಾಳೆ ಇರಬೇಕೆಂದಿಲ್ಲ. ಹೀಗಿರುವುದರಿಂದ ಕಂಪನಿಯ ಒಂದು ಕಾಲಾವಧಿಯ ಕಾರ್ಯ ಕ್ಷಮತೆಯ ಬಗ್ಗೆ ಇದರಿಂದ ತಿಳಿಯಲು ಬಹಳ ಕಷ್ಟವಾಗುವುದು. P n L ಅಕೌಂಟ್ ಇದನ್ನು ನಿಖರವಾಗಿ ಹೇಳುವುದು. ಇದು ಕಂಪನಿಯ ಒಂದು ಕಾಲಾವಧಿಯ ಕಾರ್ಯ ಕ್ಷಮತೆಯ ಬಗ್ಗೆ ಹೇಳುವುದು. ಪ್ರಾಫಿಟ್ & ಲಾಸ್ ಅಕೌಂಟ್ ಕಂಪನಿಯ ಮಾರಾಟ ಮತ್ತಿನ್ನಿತರ ಆದಾಯಗಳು ನೇರ ವಾದ ಖರ್ಚುಗಳು (Direct Cost), ಮೇಲು ವೆಚ್ಚ (Overheads), ಬಡ್ಡಿಗಳು, ಆರ್ಥಿಕ ವೆಚ್ಚಗಳು (Finance Costs), ಕೊಡಬೇಕಾದ ಹಣ (Payables) , ತೆರಿಗೆಗಳು (Taxes). ಪ್ರಾಫಿಟ್ & ಲಾಸ್ ಅಕೌಂಟ್ ನ ಒಟ್ಟು ಮೊತ್ತವು ಹೇಳಿಕೆಯ ಅವಧಿಯಲ್ಲಿನ ಉಳಿದ ಪ್ರಾಫಿಟ್ ಅಥವಾ ಲಾಸ್ ಆಗಿರುವುದು.  

ಪ್ರಾಫಿಟ್ & ಲಾಸ್ ಹೇಳಿಕೆಯ ಒಂದು ಪ್ರತಿಯನ್ನು ಇಲ್ಲಿ ನೋಡಬಹುದು.

ಇದರೊಂದಿಗೆ ಇನ್ನೊಂದು ಮುಖ್ಯ ವಿಚಾರವೆಂದರೆ ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ಒಂದಕ್ಕೊಂದು ಹತ್ತಿರದ ಸಂಬಂಧವನ್ನು ಹೊಂದಿದೆ. ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ & ಲಾಸ್ ಗಳು ಬಹಳ ಉಪಯುಕ್ತವಾದ ಹೇಳಿಕೆಗಳು, ಆದರೆ ಇವು ಪ್ರತ್ಯೇಕವಾಗಿ ಕೇವಲ ಕಂಪನಿಯ ಅರ್ಧ ಚಿತ್ರಣ ಮಾತ್ರ ಕೊಡಬಲ್ಲದು. ಕಂಪನಿಯ ಪೂರ್ತಿ ಚಿತ್ರಣ ಮತ್ತು ಕಾರ್ಯ ಕ್ಷಮತೆಯ ಬಗ್ಗೆ ತಿಳಿಯಲು ಇವೆರಡನ್ನೂ ಒಟ್ಟಾಗಿ ನೋಡಬೇಕು.

ಆಂಗ್ಲ ಅಂಕಣ:
http://somanagement.blogspot.com/2011/08/finance-and-management-29.html

No comments:

Post a Comment