ಈ ಹಿಂದಿನ ಅಂಕಣದಲ್ಲಿ ನಾವು ಕಂಪನಿಗಳು ಏಕೆ ತೆರಿಗೆ ಕಟ್ಟಬೇಕು ಎಂಬುದನ್ನ ಅರಿತೆವು. ಇಂದಿನ ಅಂಕಣದಲ್ಲಿ ನಾವು ಮತ್ತೆ ಈ P & L ಹೇಳಿಕೆಯನ್ನು ಕೂಲಂಕುಶವಾಗಿ ಅರಿಯೋಣ ಹಾಗು ಇದನ್ನು ಹೇಗೆ ತಯಾರು ಮಾಡುವರು ಎಂದು ಕೂಡ ತಿಳಿಯೋಣ.
ಸರಳವಾಗಿ ವಿವರಿಸುವುದಾದರೆ ಲಾಭವೆನ್ನುವುದು ಮಾರಾಟದ ಬೆಲೆ - ಖರ್ಚಾದ ವೆಚ್ಚ. ಯಾವುದೇ ಕಂಪನಿಗೆ ತನ್ನ ಉತ್ಪನ್ನ ಅಥವಾ ಸೇವೆಯನ್ನು ಮಾರುವುದರಿಂದ ಆದಾಯವು ಸಿಗುವುದು. ಇದನ್ನು Sales ಎಂದು ಒಟ್ಟಾಗಿ ತೋರಿಸುವರು. ಆದರೆ ಈ ಉತ್ಪನ್ನ ಅಥವಾ ಸೇವೆಯನ್ನು ಕೊಡಲು/ ಮಾರಲು ಕಂಪನಿಯು ಖರ್ಚು ಮಾಡಬೇಕಾಗುತ್ತದೆ. ಈ ಹಣವನ್ನು Cost of Goods Sold (COGS) ಎಂದು ಕರೆಯುವರು. ಹಾಗಾಗಿ P & L ನ್ನು ಹೀಗೆ ಬರಿಯಬಹುದು.
ಲಾಭ (Profit) = Sales - COGS
ಈ ಹಂತದಲ್ಲಿ ನಾವು ಹಿಂದೆ ಕಲಿತ ಕೆಲವು ವಿಚಾರಗಳಾದ depreciation, amortization , ತೆರಿಗೆ ಗಳನ್ನು ಪರಿಗಣಿಸಿಲ್ಲ. ಹಾಗಾಗಿ ಈ ಮೇಲೆ ಪಡೆದ ಲಾಭವನ್ನು ನಿವ್ವಳ ಲಾಭ ಎಂದು ಕರೆಯಲಾಗದು, ಇದನ್ನು "Gross Profit" ಎಂದು ಕರೆಯುವರು.
ಕಂಪನಿಗಳು ತಮ್ಮದೇ ಆದ ಸಂಶೋಧನೆ ಮತ್ತು ಅಭಿವೃದ್ಧಿ ಯ R&D ಘಟಕವನ್ನು ಹೊಂದಿರುತ್ತದೆ. ಇಲ್ಲಿನ ಚಟುವಟಿಕೆ ಗಳು ಒಂದು ವರ್ಷದಲ್ಲೇ ಮುಗಿಯದು, ಹಾಗಾಗಿ ಪ್ರತಿವರ್ಷ ಇದರ ಮೇಲೆ ಖರ್ಚು ಆಗುತ್ತಿರುತ್ತದೆ. ಇದನ್ನು "General Operating Expenses (R&D)" ಮುಖ್ಯಾಂಶದ ಅಡಿಯಲ್ಲಿ ತೋರಿಸುವರು. ಇದರೊಟ್ಟಿಗೆ ಪೇಟೆಂಟ್ ಮತ್ತು ಸ್ಥಿರಾಸ್ತಿಗಳಿಗೆ ಪ್ರತಿ ವರ್ಷ ಹಣವನ್ನು ಪಾವತಿಸಬೇಕಾಗುತ್ತದೆ. ಇದನ್ನೂ ಕೂಡ ಲಾಭದಿಂದ ಕಳೆಯಬೇಕು. ಇವನ್ನೆಲ್ಲ ಕಳೆದ ಮೇಲೆ ಇನ್ನೊಂದು ಉಳಿದ ಭಾಗವಿರುತ್ತದೆ. ಅದನ್ನು "Operating Income" ಎನ್ನುವರು. ಕಂಪನಿಯ ಕೈ ಯಲ್ಲಿ ಏನು ಕೊನೆಗೆ ಸಿಗುವುದು ಎನ್ನುವುದನ್ನು ಪಡೆಯಲು ಈ "Operating Income" ದನ್ನು ಕೂಡ ಪರಿಗಣಿಸ ಬೇಕು.
ಇನ್ನು ಉಳಿದ ಬಗ್ಗೆ ಇಂದು ಹೇಳಿ ಹೆಚ್ಚಿನ ಹೊರೆಯನ್ನು ಮನಕ್ಕೆ ನೀಡದಿರೋಣ. ಈ ಬಗ್ಗೆ ಮುಂದಿನ ಅಂಕಣದಲ್ಲಿ ಮುಂದುವರಿಸೋಣ.
ಆಂಗ್ಲ ಅಂಕಣ:
http://somanagement.blogspot.com/2011/08/finance-and-management-33.html
No comments:
Post a Comment