Friday, September 16, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೩೨

ಹಿಂದಿನ ಅಂಕಣದಲ್ಲಿ ನಾವು ಬಗ್ಗೆ ಅರಿತೆವು. ಇಂದಿನ ಅಂಕಣದಲ್ಲಿ ನಾವು ಕಂಪನಿಗಳ ಮೇಲೆ ತೆರಿಗೆಯನ್ನು ವಿಧಿಸುವುದರ ಕಾರಣಗಳನ್ನು ತಿಳಿಯೋಣ.

ಪ್ರತಿ ಕಂಪನಿಯು ಒಂದು ದೇಶ ಅಥವಾ ರಾಜ್ಯದ ಆಡಳಿತದೊಳಗೆ ಕಾರ್ಯನಿರ್ವಹಿಸುತ್ತದೆ. ಸರ್ಕಾರವು ರೂಪಿಸಿದ ಕಾನೂನು ಮತ್ತು ಯೋಜನೆಗಳ ಫಲವಾಗಿ ಉಂಟಾದ ಸಮಾಜದ ಲಾಭವನ್ನು ಪಡೆದು ಕಂಪನಿಗಳು ನಡೆಸಲು ಸಾಧ್ಯವಾಗುವುದು. ಸರ್ಕಾರವು ಅತ್ಯಂತ ದೊಡ್ಡ ಸಮೂಹ ಸಂಸ್ಥೆಯಾಗಿದ್ದು ಹೆಚ್ಚಿನ ಮಟ್ಟದ ಅಪಾಯನ್ನು ತೆಗೆದುಕೊಂಡು ಜನರನ್ನು ಕಾರ್ಯಗತಗೊಳಿಸಲು ಯತ್ನಿಸುತ್ತದೆ. ಇದನ್ನು ಅದು ಕಾನೂನುಗಳ ಮೂಲಕ ನಿರ್ಭಂಧಿಸಿ ಮಾಡುವುದು. ನ್ಯಾಯಾಂಗವು ಜನತೆಗೆ ನ್ಯಾಯ ದೊರಕಿಸಿ ಸಮಾನತೆಯನ್ನು ಕಾಪಾಡಿ ದೇಶದ ಅಭಿವೃದ್ಧಿಗೆ ಬಹು ಮೂಲ್ಯ ಕೊಡುಗೆ ನೀಡುವುದು. ಮುಂದಿನ ಹಂತದಲ್ಲಿ ನಾವು ವ್ಯವಹಾರಗಳಿಗೆ ಪರಿಣಾಮ ಬೀರಿದ ಹಲವು ಕಾನೂನುಗಳ ಬಗ್ಗೆ ನೋಡೋಣ.

ಈ ಎಲ್ಲ ಚಟುವಟಿಗೆಗಳಿಗೆ ಮತ್ತು ಇನ್ನು ಹೆಚ್ಚಿನದ್ದಕ್ಕೆ ಸರ್ಕಾರವು ಕಂಪನಿಗಳಿಂದ ಮತ್ತು ನಾಗರೀಕರಿಂದ ತೆರಿಗೆಗಳನ್ನು ವಸೂಲಿ ಮಾಡುತ್ತದೆ. ಕಂಪನಿಯ ಪ್ರಾಫಿಟ್ & ಲಾಸ್ ಅಕೌಂಟ್ ಕಂಪನಿಯ ಮೇಲೆ ವಿಧಿಸಿದ ತೆರಿಗೆಯನ್ನು ಹೇಳುವುದು.

ಈ ರೀತಿ ಸಂಗ್ರಹ ಮಾಡಿದ ತೆರಿಗೆಗಳನ್ನು ಸರ್ಕಾರವು ಪುನಃ ಇದೆ ವ್ಯವಸ್ಥೆಯಲ್ಲಿ ತೊಡಗಿಸಿ ಇನ್ನು ಹೆಚ್ಚಿನ ಉನ್ನತಿಗೆ ಅನುವು ಮಾಡಿಕೊಡುವುದು. 

ಅಂಗ್ಲ ಅಂಕಣ:
http://somanagement.blogspot.com/2011/08/finance-and-management-32.html

No comments:

Post a Comment