Friday, September 16, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೩೧

ಹಿಂದಿನ ಅಂಕಣದಲ್ಲಿ ನಾವು Depreciation ಬಗ್ಗೆ ಅರಿತೆವು. ಇಂದಿನ ಅಂಕಣದಲ್ಲಿ ನಾವು Amortization ಬಗ್ಗೆ ತಿಳಿಯೋಣ.

ನಾವು Depreciation ಬಗ್ಗೆ ವಿವರಿಸುವಾಗ ಭೌತಿಕವಾದ ಆಸ್ತಿಯ ಉದಾಹರಣೆಯನ್ನು ನೀಡಿದೆವು. ನಂತರ ಇದು ಎಲ್ಲ ರೀತಿಯ ಅಂದರೆ ಭೌತಿಕವಲ್ಲದ ಆಸ್ತಿಗೆ ಕೂಡ ಅನ್ವಯವಾಗುವುದು ಎಂದು ಅರಿತೆವು. ಈ Depreciation ನ್ನು ಭೌತಿಕವಲ್ಲದ ಆಸ್ತಿಗಳಾದ ಟ್ರೇಡ್ ಮಾರ್ಕ್, ಪೇಟೆಂಟ್, ಕಾಪಿ ರೈಟ್ ಇತ್ಯಾದಿ ಕಂಪನಿಯ ಸ್ವಂತದ್ದವುಗಳಿಗೆ ಅನ್ವಯಿಸಿದಾಗ ಅದನ್ನ Amortization ಎಂದು ಕರೆಯುವರು. 

ಇದನ್ನು ಉದಾಹರಣೆಯ ಜೊತೆಗೆ ಸರಿಯಾಗಿ ಅರ್ಥ ಮಾಡಿಕೊಳ್ಳೋಣ. ABC Pvt. Ltd. ಕಂಪನಿಯು ಒಂದು ಕ್ಯಾಲಿಬ್ರೇಶನ್ ಯಂತ್ರವನ್ನು ೩,೦೦,೦೦೦/- ಗೆ ಖರೀದಿಸಿತೆಂದು ಕೊಳ್ಳೋಣ. ಆ ಯಂತ್ರಕ್ಕೆ ೧೫ ವರ್ಷಗಳ ಪೇಟೆಂಟ್ ನ ರಕ್ಷಣೆ ಇದೆ ಎಂದು ಭಾವಿಸೋಣ. ಇದರರ್ಥ ಪ್ರತಿ ವರ್ಷ ೨೦,೦೦೦/- ನ್ನುAmortization ನ ಖರ್ಚು ಎಂದು ದಾಖಲಿಸುವರು. 

ಈ ಹಣ ಸಂದಾಯವನ್ನು ಸಾಮಾನ್ಯವಾಗಿ ಹಲವು ಕಂತುಗಳಲ್ಲಿ ಮಾಡುವರು ಮತ್ತು ಇದನ್ನು amortization schedule ಎಂದೆನ್ನುವರು. 

ಆಂಗ್ಲ ಅಂಕಣ:
http://somanagement.blogspot.com/2011/08/finance-and-management-31.html

No comments:

Post a Comment