Saturday, October 1, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೩೫

ಹಿಂದಿನ ಅಂಕಣದಲ್ಲಿ ನಾವು PnL ನ ಎಲ್ಲ ಶೀರ್ಷಿಕೆಗಳ ಬಗ್ಗೆ ಅರಿಯುವುದನ್ನು ಮುಗಿಸಿದೆವು. ಇಂದು ನಾವು ಐ. ಟಿ. ಉದ್ಯಮದಲ್ಲಿ ಲಾಭಾಂಶದ ಬಗ್ಗೆ ಹೆಚ್ಚಾಗಿ ಉಪಯೋಗಿಸುವ ಪ್ರಸಿದ್ಧ EBITDA ಬಗ್ಗೆ ತಿಳಿಯೋಣ.

ಹಿಂದಿನ ಅಂಕಣದಿಂದ ನಮಗೆ EBIT ಎಂದರೆ ತೆರಿಗೆ ಮತ್ತು ಬಡ್ಡಿಯ ಮೊದಲಿನ ಆದಾಯ "Earnings before Interest and Taxes"; ಎಂದು ಗೊತ್ತಿದೆ. EBITDAನ ವಿವರಣೆ ಕೂಡ ಇದೇ ರೀತಿಯದ್ದಾಗಿರುತ್ತದೆ, ಇದರೊಂದಿಗೆ depreciation and amortization ಸೇರಿಸೋಣ. ಇದು ಲಾಭಾಂಶವನ್ನು ಅಳೆಯಲು ತುಂಬಾ ಅನುಕೂಲಕರವಾದ ಸಾಧನವೆಂದು ಉದ್ಯಮಗಳ ಜಗತ್ತಿನಲ್ಲಿ ಪ್ರಚಲಿತವಾಗಿದೆ.  EBITDA ನ್ನು ಪಡೆಯಲು ನಿವ್ವಳ ಲಾಭವನ್ನು ತೆಗೆದು ಕೊಂಡು ಅದಕ್ಕೆ ಬಡ್ಡಿ ಮತ್ತು ತೆರಿಗೆ, depreciation and amortization ಗಳನ್ನು ಪುನಃ ಸೇರಿಸಬೇಕು.

ಆದರೆ EBITDA ನ ಪರ ಮತ್ತು ವಿರೋಧವಾದ ಎರಡೂ ಚರ್ಚೆಗಳಿವೆ.

  ವಿರೋಧವಾದ ಅಂಶಗಳು ಹೀಗಿವೆ:

೧. ಆದಾಯ , ತೆರಿಗೆ,depreciation and amortization ಇವೆಲ್ಲವನ್ನೂ ತೆಗೆದು ಕೊಳ್ಳುವುದರಿಂದ ಲಾಭವಿಲ್ಲದ ಕಂಪನಿಯು ಕೂಡ ಆರ್ಥಿಕವಾಗಿ ಉತ್ತಮವಾಗಿದೆ ಎಂದು ಭಾಸವಾಗುವುದು.
೨. ಇದನ್ನು ಸುಲಭವಾಗಿ ಬದಲಾಯಿಸಬಹುದು. ವಂಚಿಸುವ ರೀತಿಯ ಅಕೌಂಟ್ ಅಭ್ಯಾಸಗಳನ್ನು ಇಟ್ಟುಕೊಳ್ಳುವುದರಿಂದ ಕಂಪನಿಗಳನ್ನು ಬಹಳ ಉತ್ತಮವಾಗಿ ಬಿಂಬಿಸಬಹುದು.

ಆದರೆ ಇದರ ಪರ ಇರುವ ಅಂಶಗಳು:

೧. ಇದನ್ನು ಉಪಯೋಗಿಸಿ ಸರಳವಾದ ಹತ್ತಿರದ ದಾರಿಯಿಂದ ಹಣದ ಹರಿವಿಕೆಯನ್ನು ಅಳೆಯಬಹುದು, ಇದರಿಂದ ಧೀರ್ಘ ಕಾಲೀನ ಸಾಲಗಳನ್ನು ತೀರಿಸಲು ಉಪಯೋಗಿಸಬಹುದು.
೨. ಇದನ್ನು ಕಂಪನಿಗಳ ನಡುವಣ ಹೋಲಿಕೆಗೆ ಉಪಯೋಗಿಸಬಹುದು ಹಾಗು ಉದ್ಯಮದ ದರ್ಜೆಗೆ ಸಮವಾಗಿರುವುದನ್ನು ಹೋಲಿಸಬಹುದು.
೩. ಇದರಲ್ಲಿ ಹೆಚ್ಚಿನ ಅಗತ್ಯವಿಲ್ಲದ ಅಂಶಗಳನ್ನು ತೆಗೆಯುವುದರಿಂದ,ಇದು ನಿಜವಾದ ಒಳಗಿನ ಲಾಭದ ಬಗ್ಗೆ ಹೇಳುವುದು. ಹಾಗಾಗಿ ಸಮಾನ ರೀತಿಯ ಹೋಲಿಕೆಗೆ ಸಾಧ್ಯವಾಗುವುದು.

೨ ತುಂಬಾ ಆಸಕ್ತಿದಾಯಕ ವಿಚಾರಗಳನ್ನು ಇದರಿಂದ ಪಡೆಯಬಹುದು.

Measure of Debt's payback period = Debt/EBITDA
Interest coverage ratio = EBITDA /Interest Expense
ಆಂಗ್ಲ ಅಂಕಣ:
http://somanagement.blogspot.com/2011/08/finance-and-management-35.html 



No comments:

Post a Comment