Pages

Saturday, October 1, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೩೬

ಹಿಂದಿನ ಅಂಕಣದಲ್ಲಿ EBITDA. ಬಗ್ಗೆ ನೋಡಿದೆವು. ಇಂದಿನ ಅಂಕಣದಲ್ಲಿ ನಾವು ಹಣದ ಹರಿಯುವಿಕೆಯ ಹೇಳಿಕೆಯ (cash flow statements) ಬಗ್ಗೆ ಅರಿಯೋಣ. 

PnL account or Balance ಶೀಟ್ ಗಳು ಕಂಪನಿಯ ಒಳಗೆ ಕಾರ್ಯ ನಿರ್ವಹಿಸುವ ಹಣದ ಬಗ್ಗೆ ಸರಿಯಾಗಿ ಹೇಳಲು ಅಸಮರ್ಥವಾಗುವುದು. ಇದನ್ನು ಅರಿಯಲು ಇರುವ ಉತ್ತಮ ಸಾಧನವೇ "Cash Flow Statement" (CFS). CFS, ಬ್ಯಾಲೆನ್ಸ್ ಶೀಟ್ ನಲ್ಲಿನ ಅಕೌಂಟ್ ನ ಬದಲಾವಣೆಗಳು ಮತ್ತು ಆದಾಯದ ಅಕೌಂಟ್ ನ ಬದಲಾವಣೆಗಳಿಂದ ಹಣ ಅಥವಾ ಹಣಕ್ಕೆ ಸಮನಾಂತರವಾದವುಗಳಿಗೆ ಆಗುವ ಪರಿಣಾಮ, ಮತ್ತು ಇದು ವಿಶ್ಲೇಷಣೆಯನ್ನು ಮೂರು ಭಾಗಗಳಾಗಿ ವಿಭಜಿಸುವುದು. ಕಾರ್ಯ ನಿರ್ವಹಣೆ, ಹೂಡಿಕೆ, ಆರ್ಥಿಕ (operating, investing, and financing ) ವೆಂದು. ಇದು ಕಂಪನಿಯ liquidity ನ್ನು ಹೇಳುವುದು.

ಹಣದ ಹರಿವಿಕೆಯನ್ನು ತಿಳಿಯಲು ಈ ೩ ವಿಚಾರಗಳಿಂದ ಬರುವ ಹಣವನ್ನು ತಿಳಿದರೆ ಸಿಗುವುದು.

೧. ಕಾರ್ಯ ನಿರ್ವಹಣೆ operating
೨. ಹೂಡಿಕೆ investing,
೩. ಆರ್ಥಿಕ financing 

 ೧. ಕಾರ್ಯ ನಿರ್ವಹಣೆ operating: ಸಾಮಾನ್ಯವಾಗಿ ಕಂಪನಿಯ ಹಣ, accounts receivable, depreciation, inventory and accounts payable ಗಳಲ್ಲಿ ಮಾಡಿದ ಬದಲಾವಣೆಗಳು ಇಲ್ಲಿ ಪ್ರತಿಫಲಿತವಾಗುವುದು.

೨. ಹೂಡಿಕೆ investing: ಕಂಪನಿಯ ಆಸ್ತಿ ಅಥವಾ ಹಣದ ಒಡನೆ ಸಂಬಂಧವಿರುವ ಹೂಡಿಕೆ, ಯಂತ್ರೋಪಕರಣಗಳು ಗಳಲ್ಲಿನ ಬದಲಾವಣೆ.

೩. ಆರ್ಥಿಕ financing : ಕಂಪನಿಯ ಸಾಲಗಳು, ಇತರ ಬಾಕಿ ಸಂದಾಯಗಳು, ಡಿವಿಡೆಂಡ್ ಗಳಲ್ಲಿನ ಬದಲಾವಣೆ.
ಆಂಗ್ಲ ಅಂಕಣ:
http://somanagement.blogspot.com/2011/08/finance-and-management-36.html

No comments:

Post a Comment