Tuesday, October 4, 2011

ಸಾಂಸ್ಥಿಕ ಸಿದ್ಧಾಂತ - ೨

 ಹಿಂದಿನ ಅಂಕಣದಲ್ಲಿ ನಾವು ಸಂಸ್ಥೆಯ ಕೆಲವು ವಿಶೇಷ ಗುಣಗಳ ಬಗ್ಗೆ ಕಲಿತೆವು. ಇಂದಿನ ಅಂಕಣದಲ್ಲಿ ಅದನ್ನೇ ಮುಂದುವರಿಸಿ ಸಂಸ್ಥೆಯ ಬಗ್ಗೆ ಇನ್ನು ಅಧಿಕ ಅರಿವನ್ನು ಪಡೆಯೋಣ.

ಇಂದು ನಾವು ಕಾಣುವ ಮತ್ತು ಅರಿತಿರುವ ಸಂಸ್ಥೆ ಎನ್ನುವು ವಿಚಾರವು ಹಿಂದೆ ಕೈಗಾರಿಕೀಕರಣದ ಮತ್ತು ಆ ನಂತರದ ಬೆಳವಣಿಗೆಯಿಂದ ಉಂಟಾದುದು. ಹೀಗಾಗಿ ಇದು ಮಾನವನ ಇತಿಹಾಸಕ್ಕೆ ಹೋಲಿಸಿದಲ್ಲಿ ತೀರ ಹಳತೇನು ಅಲ್ಲ. ಈ ರೀತಿಯ ಸಂಸ್ಥೆಯ ಸ್ವರೂಪ ಉಂಟಾಗುವ ಮೊದಲು ಹಲವಾರು ಪ್ರಭಾವಶಾಲಿಯಾದ ಕಾನೂನುಗಳು ರೀತಿ - ನಿಯಮಾವಳಿಗಳು ಜನರ ಹಿತ ದೃಷ್ಟಿಯಿಂದ ರೂಪಿತವಾಗಿದ್ದವು. ಸಂಸ್ಥೆಯ ವಿವಿಧ ಪ್ರಕಾರಗಳು ವಿವಿಧ ಅಗತ್ಯತೆಗಳನ್ನು ಪೂರೈಸಲು ತಮಗೆ ತಾವೇ ಬದಲಾಗಿವೆ.

ಇಂದಿನ ದಿನಗಳಲ್ಲಿ ಸಂಸ್ಥೆಯೆನ್ನುವುದು ಕೆಳಗಿನ ಉದ್ದೇಶಗಳಿಂದ ಅಸ್ತಿತ್ವದಲ್ಲಿದೆ.
೧. ಸಂಪನ್ಮೂಲಗಳನ್ನು ಒಟ್ಟುಗೂಡಿಸಿ ಉದ್ದೇಶಿಸಿದ ಗುರಿ ಮತ್ತು ಫಲಿತಾಂಶ ಪಡೆಯಲು
೨. ಸೇವೆ ಮತ್ತು ಉತ್ಪನ್ನಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಉತ್ಪಾದಿಸಲು.
೩. ಹೊಸತನಕ್ಕೆ ಸೃಷ್ಟಿಗೆ ಅನುಕೂಲ ಮಾಡುವುದು.
೪. ಆಧುನಿಕ ಉತ್ಪಾದನೆಯ ಮತ್ತು ಮಾಹಿತಿ ತಂತ್ರಜ್ಞಾನ ಉಪಯೋಗಿಸಲು.
೫. ಬದಲಾವಣೆಯ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಲು ಮತ್ತು ಶಿಫಾರಸು ಮಾಡಲು.
೬. ಮಾಲಿಕರಿಗೆ, ಗ್ರಾಹಕರಿಗೆ ಮತ್ತು ಉದ್ಯೋಗಿಗಳಿಗೆ ತಕ್ಕ ಮೌಲ್ಯಗಳನ್ನು ನೀಡಲು.
೭. ಸದಾ ಎದುರಾಗುವ ಸವಾಲು ಗಳಾದ ವಿವಿಧತೆ, ಮೌಲ್ಯಗಳು, ಸ್ಪೂರ್ತಿ, ಸಾಮರಸ್ಯ ಇತ್ಯಾದಿಗಳನ್ನೂ ಉದ್ಯೋಗಿಗಳಲ್ಲಿ ಹೊಂದಲು.

ಮ್ಯಾನೇಜರ್ ಆದವರಿಗೆ ಇದು ತುಂಬಾ ಮಹತ್ವವಾದ ಮಾಹಿತಿ. ಒಂದು ಸಂಸ್ಥೆಯು ನಮ್ಮ ಜೀವನವನ್ನು ರೂಪಿಸುತ್ತದೆ, ಸರಿಯಾದ ಜ್ಞಾನ ಹೊಂದಿರುವ ಮ್ಯಾನೇಜರ್ ಒಂದು ಸಂಸ್ಥೆಯನ್ನು ಉತ್ತಮವಾಗಿ ನಡೆಸಬಲ್ಲ.

ಆಂಗ್ಲ ಅಂಕಣ:
http://somanagement.blogspot.com/2011/09/organization-theory-2.html

No comments:

Post a Comment