Monday, October 10, 2011

ಸಾಂಸ್ಥಿಕ ಸಿದ್ಧಾಂತ - ೪

ಹಿಂದಿನ ಅಂಕಣದಲ್ಲಿ ಸಂಸ್ಥೆ ಎನ್ನುವುದನ್ನು ಒಂದು ವ್ಯವಸ್ಥೆ ಎಂದು ಅರಿತೆವು, ಹಾಗು ಇಂದಿನ ಅಂಕಣದಲ್ಲಿ ಅದರ ಬಗ್ಗೆ ಚರ್ಚೆಯನ್ನು ಮುಂದುವರಿಸುತ್ತೇವೆ ಎಂದು ಕೂಡ ಹೇಳಿದ್ದೆವು. ಅದರಂತೆ ಇಂದು ಸಂಸ್ಥೆಯ ಚಿತ್ರಣ ನೋಡೋಣ.

ಈ ಮೇಲಿನ ಚಿತ್ರವು ಒಂದು ಸಂಸ್ಥೆಯು ಈ ಕೆಳಗಿನವುಗಳನ್ನು ಒಳಗೆ ಪಡೆದುಕೊಳ್ಳುತ್ತದೆ. ಅವೇ ಜನರು, ಕಚ್ಚಾ ವಸ್ತುಗಳು, ಭೌತಿಕ ಸಂಪನ್ಮೂಲಗಳು, ಆರ್ಥಿಕ ಸಂಪತ್ತು ಇತ್ಯಾದಿ. ಇವುಗಳನ್ನು ಒಂದು ಪರಿವರ್ತಕ ಪ್ರಕ್ರಿಯೆಯ ಮೂಲಕ (ಚಿತ್ರದಲ್ಲಿ ಮೋಟಾರ್ ನ್ನು ಈ ಉದ್ದೇಶಕ್ಕೆ ತೋರಿಸಲಾಗಿದೆ ವಿದ್ಯುತ್ ಶಕ್ತಿಯನ್ನು ಯಂತ್ರಿಕ ಶಕ್ತಿಯಾಗಿ ಪರಿವರ್ತಿಸುತ್ತದೆ.) ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಗ್ರಾಹಕರಿಗೆ ನೀಡುವುದು. ಆದರೆ ಇವೆ ಮಾತ್ರವೇ ಕಂಪನಿಯ ನೀಡುವಿಕೆಯಲ್ಲ, ಇವಲ್ಲದೆ ಉದ್ಯೋಗಿಗಳಿಗೆ ಸಂತೃಪ್ತಿ, ಮಾಲಿನ್ಯ ಇವೆ ಮೊದಲಾದ ಎರಡನೇ ರೀತಿಯ ಹೊರ ನೀಡುವಿಕೆಗಳಿರುತ್ತದೆ.

ಚಿತ್ರದಲ್ಲಿರುವ ಸಮಗ್ರ ಯಂತ್ರವನ್ನು ಉಪವ್ಯವಸ್ತೆಯ ಒಟ್ಟು ಸಮೂಹವೆಂದು ಅರಿಯಬಹುದು. ಹಾಗಾಗಿ ಪರಿವರ್ತನೆಯ ಪ್ರಕ್ರಿಯೆಯೇ ಹಲವಾರು ಉಪಪ್ರಕ್ರಿಯೆಗಳಿಂದ ಆಗುವುದು, ಅವೇ ಉತ್ಪನ್ನ ಕ್ಷೇತ್ರ, ನಿರ್ವಹಣ ಕ್ಷೇತ್ರ, ಮ್ಯಾನೇಜ್ಮೆಂಟ್ ಇತ್ಯಾದಿ. ಇವುಗಳಲ್ಲದೆ ಕೆಲವು ಸಿಮಾ ಸೇತುವೆಗಳಂತಹ ಉಪವ್ಯವಸ್ಥೆಯ ಇರುವುದು. ಇವುಗಳು ಹೊರಗಿನ ಪರಿಸರದೊಂದಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಇರುವಂತವುಗಳು. ಈ ಉಪವ್ಯವಸ್ಥೆಯು ಅತ್ಯಂತ ಅವಕಾಶಗಳನ್ನು ಒದಗಿಸುವಲ್ಲಿ ಪ್ರಮುಖವಾಗಿದ್ದು ಸಂಸ್ಥೆಯ ಉಳಿವಿನ ಮೂಲ ಇದೆ ಆಗಿರುತ್ತದೆ. 

ಆಂಗ್ಲ ಅಂಕಣ:
http://somanagement.blogspot.com/2011/09/organization-theory-4.html

No comments:

Post a Comment