Pages

Tuesday, October 11, 2011

ಸಾಂಸ್ಥಿಕ ಸಿದ್ಧಾಂತ - ೫

ಹಿಂದಿನ ಅಂಕಣದಲ್ಲಿ ನಾವು ಒಂದು ಮುಕ್ತ ಸಂಸ್ಥೆಯ ಬಗ್ಗೆ ಚಿತ್ರದ ರೂಪದಲ್ಲಿ ಅರಿತೆವು. ಇಂದಿನ ಅಂಕಣದಲ್ಲಿ ಕಂಪನಿಯಲ್ಲಿನ  ಕಾರ್ಯ ನಿರ್ವಹಿಸುವ ವಿವಿಧ ಉಪ ವ್ಯವಸ್ಥೆಗಳು ಬಗ್ಗೆ ಚಿತ್ರದ ಮೂಲಕ ಅರಿಯೋಣ. 

ನಾವು ಓರ್ವ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಯಾದ ಹೆನ್ರಿ ಮಿಂಟ್ಸ್ ಬರ್ಗ್ ನ ಲೇಖನದಲ್ಲಿರುವ ಚಿತ್ರವನ್ನು ಇಲ್ಲಿ ಉಲ್ಲೇಖಿಸುವ ಮೂಲಕ ಅರಿಯೋಣ. ಪೂರ್ತಿ ಲೇಖನದ ಲಿಂಕ್ ಇಲ್ಲಿದೆ. 
ವಿವಿಧ ಪ್ರಕಾರಗಳ ,ಗಾತ್ರಗಳ , ಕ್ಷೇತ್ರಗಳ, ಉದ್ಯಮಗಳ ಸಂಸ್ಥೆಗಳನ್ನೆಲ್ಲ ಅಧ್ಯಯನ ಮಾಡಿದಾಗ ತಿಳಿಯುವ ಅಂಶವೇನೆಂದರೆ ಪ್ರಮುಖವಾಗಿ ಸಂಸ್ಥೆಗಳಲ್ಲಿ ೫ ವಿಭಾಗಗಳಿರುತ್ತದೆ. ಇವುಗಳು ಪ್ರತಿಯೊಂದು ಸಂಸ್ಥೆಗಳಿಗೂ ಬೇರೆ ಬೇರೆಯಾಗಿರಬಹುದು.
ಅವು:

೧. Strategic Apex: ಸಂಸ್ಥೆಯು ಒಂದು ವಿಚಾರಗಳು ಅಥವಾ ಯೋಚನೆಗಳಿಂದ ಶುರುವಾಗಿರುತ್ತದೆ ಮತ್ತು ಅವು ಓರ್ವ ವ್ಯಕ್ತಿ ಅಥವಾ ಮ್ಯಾನೇಜ್ಮೆಂಟ್ ನ ಸದಸ್ಯರಿಂದ ನಡೆಸಲ್ಪಡುತ್ತಿರುತ್ತದೆ. ಇದೆ Strategic Apex: 
೨. Operating Core: ಸಂಸ್ಥೆಯ ಮೂಲಭೂತ ಕೆಲಸ ಕಾರ್ಯಗಳನ್ನು ಮಾಡಲು ಜನರನ್ನು ಸೇರಿಸಿಕೊಳ್ಳುವರು. ಇವರು Operating Core:ನ್ನು ಪ್ರತಿಬಿಂಬಿಸುವರು.
೩. Middle Line: ಈ ಕೆಲಸಗಾರರು ಅಥವಾ ಕೆಲ ಮಟ್ಟದ ಉದ್ಯೋಗಿಗಳು ಸಾಮಾನ್ಯವಾಗಿ ನೇರವಾಗಿ ಮೇಲಿನ ಮ್ಯಾನೇಜ್ಮೆಂಟ್ ನೊಡನೆ ವ್ಯವಹರಿಸರು, ಇವರ ನಡುವೆ ಅನೇಕ ಬಗೆಯ ಮ್ಯಾನೇಜರ್ ಗಳಿರುತ್ತಾರೆ. ಇವರೇ Middle Line
೪. Technostructure: ಇವರು ಸಾಮಾನ್ಯವಾಗಿ ಸಂಶೋಧಕರಾಗಿರುವರು, ಇವರು ಔಪಚಾರಿಕ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯ ನಿರ್ವಹಿಸಲು  ವ್ಯವಸ್ಥೆಯನ್ನು ರೂಪಿಸುವರು.
೫. Support Staff: ಈ ಜನರು ಸಾಮಾನ್ಯವಾಗಿ ಪರೋಕ್ಷ ರೀತಿಯಲ್ಲಿ ಇತರ ಸಂಸ್ಥೆಯ ಜನರಿಗೆ ಸಹಕಾರ ನೀಡುವರು. ಉದಾ: ಕ್ಯಾಂಟೀನ್, ಪಬ್ಲಿಕ್ ರಿಲೇಶನ್ ಇತ್ಯಾದಿ

ಮುಂದಿನ ಅಂಕಣಗಳಲ್ಲಿ ಹೇಗೆ ಈ ೫ ವಿಭಾಗಗಳು ವಿವಿಧ ಸಂಸ್ಥೆಗಳಲ್ಲಿ ಬದಲಾವಣೆ ಹೊಂದುತ್ತವೆ ಎಂದು ಅರಿಯೋಣ.

ಆಂಗ್ಲ ಅಂಕಣ:
http://somanagement.blogspot.com/2011/09/organization-theory-5.html

No comments:

Post a Comment