Saturday, October 1, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೩೮

ಈ ಹಿಂದಿನ ಸಂದೇಶದಲ್ಲಿ ಹೇಳಿದಂತೆ ನಾವು ಈ cost accounting ವಿಚಾರಗಳನ್ನು ಮುಂದುವರಿಸುವೆವು. ಆದರೆ ಇದರೊಂದಿಗೆ ಸಂಸ್ಥೆ ಮತ್ತು ಅದರೊಳಗಿನ ವ್ಯವಸ್ಥೆಯ ನಿರ್ವಹಣೆ ಕಾರ್ಯ ಶೈಲಿ ಇತ್ಯಾದಿಗಳನ್ನು ಅರಿಯುವ ಅಗತ್ಯವಿದೆ. ಇದರಿಂದ cost accounting ನ್ನು ಉಪಯುಕ್ತತೆ ಅರಿವಾಗುವುದು. ಇಂದಿನ ಅಂಕಣದಲ್ಲಿ ನಾವು cost accounting. ನ ಅಗತ್ಯತೆಯ ಬಗ್ಗೆ ತಿಳಿಯೋಣ. 

ನಾವು ಹಿಂದೆಯೇ ಹೇಳಿದಂತೆ ಮ್ಯಾನೇಜ್ಮೆಂಟ್ ಅನ್ನುವುದು ಕೊನೆಗೆ ಎಲ್ಲದಾಗಿ ನಿರ್ಧಾರ ಮಾಡುವ ಕಲೆ.ಎಲ್ಲ ರೀತಿಯ ಮ್ಯಾನೇಜ್ಮೆಂಟ್ ನ ಮುಖ್ಯತೆ ಗಳೆಲ್ಲವೂ ಒಬ್ಬ ಮ್ಯಾನೇಜರ್ ನ ಗೊಂದಲಗಳನ್ನು ಕಡಿಮೆ ಮಾಡಿ ನಿರ್ಧಾರ ಮಾಡಲು ಸಹಾಯ ಮಾಡುತ್ತದೆ. ನಾವು ಮೊದಲಿಗೆ ಸಾಮಾನ್ಯ ಅಕೌಂಟಿಂಗ್ ನ್ನು ಮ್ಯಾನೇಜರ್ ನ ಸಹಾಯ ಸಾಧನವೆಂದು ಪರಿಗಣಿಸಿ ಅದರಿಂದ ಹೇಗೆ ಉಪಯೋಗವಯಿತೆಂದು ನೋಡಿದೆವು. ಇಂದು ನಾವು ಇನ್ನು ಸೂಕ್ತವಾದ ವ್ಯವಸ್ಥಾಪಕ ಸಾಧನವಾದ cost accounting ನ ಕಡೆಗೆ ಮುನ್ನಡೆಯುತ್ತಿದ್ದೇವೆ. ಇದು ಮ್ಯಾನೇಜರ್ ಗಳಿಗೆ ಒದಗಿಸುವ ಸಹಾಯದ ಕಾರಣದಿಂದ ಇದನ್ನು ಸಾಮಾನ್ಯವಾಗಿ managerial accounting ಎಂದೂ ಕರೆಯುವರು. ಇವೆರಡರ ನಡುವೆ ವ್ಯತ್ಯಾಸಗಳಿದ್ದರೂ ಎಲ್ಲ ರೀತಿಯ ಬಳಕೆಗೆ ಇವೆರಡನ್ನೂ ಒಂದೇ ಎಂದು ಪರಿಗಣಿಸಬಹುದು. 

ಕಂಪನಿಯ ಖರ್ಚಿನ ಬಗೆಗಿನ ಮಾಹಿತಿ ಮ್ಯಾನೇಜರ್ ಗಳಿಗೆ ಅತ್ಯಂತ ಮುಖ್ಯವಾದ ಮಾಹಿತಿ. ಮ್ಯಾನೇಜರ್ ಗಳು ತಮ್ಮ ಕಂಪನಿಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವರೆ ಹೊರತು ಇತರ ಕಂಪನಿಗಳ ಬಗ್ಗೆ ಅಲ್ಲ, ಹೀಗಾಗಿ ಇತರ ಕಂಪನಿಗಳ ಬಗೆಗಿನ ಮಾಹಿತಿಯ ಅಗತ್ಯವಿರದು. ಈ ಆಸಕ್ತಿಗೆ ಮೂಲಭೂತ ಕಾರಣ, ಕಂಪನಿಯ ಖರ್ಚು, ಕಂಪನಿಯ ಗ್ರಾಹಕರಿಗೆ ಏನನ್ನು ಯಾವ ಬೆಲೆಯಲ್ಲಿ ಕೊಡುವಿರಿ ಎಂಬುದನ್ನು ನಿರ್ಧರಿಸುತ್ತದೆ, ಮತ್ತೆ ಇದು ಕಂಪನಿಯ ಲಾಭವನ್ನು ಕೂಡ ನಿರ್ಧರಿಸುತ್ತದೆ. 

ಇದೆ ಚರ್ಚೆಯನ್ನು ಇನ್ನು ಮುಂದಿನ ಅಂಕಣಗಳಲ್ಲಿ ಮುಂದುವರಿಸೋಣ. ಆ ಮೂಲಕ ಚೆನ್ನಾಗಿ ಅರಿಯುವ ಯತ್ನ ಮಾಡೋಣ.

ಆಂಗ್ಲ ಅಂಕಣ:
http://somanagement.blogspot.com/2011/09/as-mentioned-in-last-message-we-would.html

No comments:

Post a Comment