Pages

Tuesday, October 4, 2011

ಸಾಂಸ್ಥಿಕ ಸಿದ್ಧಾಂತ -೩

ಹಿಂದಿನ ಅಂಕಣದಲ್ಲಿ ನಾವು ಸಂಸ್ಥೆಯ ಮಹತ್ವವನ್ನು ಅರಿತೆವು. ಇಂದಿನ ಅಂಕಣದಿಂದ ನಾವು ಸಂಸ್ಥೆಯನ್ನು ಅಧ್ಯಯನ ಮಾಡಲು ಒಂದು ದೃಷ್ಟಿಕೋನವನ್ನು ಅರಿಯುವ ಯುತ್ನ ಮಾಡೋಣ. ನಾವು ಸಂಸ್ಥೆಯನ್ನು ಒಂದು "ವ್ಯವಸ್ಥೆ" ಎಂದು ಅರಿಯಲು ಯತ್ನಿಸೋಣ.

ನಾವು ಒಂದು ವ್ಯವಸ್ಥೆಯನ್ನು ಪರಿಸರದಿಂದ ತೆಗೆದುಕೊಂಡು ಮಾರ್ಪಾಡುಗೊಳಿಸಿ ಹೊರಗಿನ ಪರಿಸರಕ್ಕೆ ಕೊಡುವ  ಪರಸ್ಪರ ವ್ಯವಹಾರ ನಡೆಸುತ್ತಿರುವ ಒಂದು ಗುಂಪು ಎಂದು ವ್ಯಾಖ್ಯಾನಿಸಬಹುದು. ಇದರೊಂದಿಗೆ ಇನ್ನೊಂದು ಸ್ಪಷ್ಟವಾಗುವುದೆನಂದರೆ ಈ ವ್ಯವಸ್ಥೆಯೊಳಗೆ ಕೂಡ ಚಿಕ್ಕ ಚಿಕ್ಕ ವ್ಯವಸ್ಥೆಗಳಿರುತ್ತದೆ. ಅವೇ ಉತ್ಪಾದನೆ ಘಟಕ (Production), ನಿರ್ವಹಣ ಘಟಕ (Maintenance) ಇತ್ಯಾದಿ. ಈ ಚಿಕ್ಕ ಚಿಕ್ಕ ವ್ಯವಸ್ಥೆಗಳು ನಾವು ಬಹಳ ಹಿಂದೆ ಈ ಅಂಕಣದಲ್ಲಿ ಹೇಳಿದ ವ್ಯವಹಾರಂಗಗಳು ಗಳೊಂದಿಗೆ ಸಂಬಂಧಿತವಾಗಿದೆ. 

ನಾವು ಕೇವಲ ಒಂದು ಸಂಸ್ಥೆಯನ್ನ್ನು ತೆಗೆದುಕೊಂಡು ಅದನ್ನು ಹೊರ ಜಗತ್ತಿನಿಂದ ಬೇರ್ಪಡಿಸಿ ಹೊರ ಜಗತ್ತಿಗೆ ಕಾಣಿಸದಂತೆ ಇಟ್ಟು ಸಂಪೂರ್ಣ ಪ್ರತ್ಯೇಕಿಸಿದಲ್ಲಿ ಅದು ಸ್ವಂತವಾಗಿ ಕಾರ್ಯ ನಿರ್ವಹಿಸುತ್ತದೆ. ಈ ರೀತಿಯಲ್ಲಿ ಅರಿತುಕೊಳ್ಳುವ ವಿಧಾನಕ್ಕೆ ಸಂಸ್ಥೆಯ ಮುಚ್ಚಿದ ವ್ಯವಸ್ಥೆಯ ಅರಿವಿನ ವಿಧಾನ ಎನ್ನುವರು. ಈ ರೀತಿಯ ಸಂಸ್ಥೆ ಕೇವಲ ಕಾಲ್ಪನಿಕ ಮಾತ್ರ ಹಾಗಾಗಿ ಹೊರಗಿನ ಪರಿಸರದೊಡನೆ ಸಂಪರ್ಕ ಮತ್ತು ಸಂಬಂಧಗಳನ್ನು ಸಂಸ್ಥೆಗೆ ಸೇರಿಸಲೇಬೇಕಾಗುತ್ತದೆ. ಈ ರೀತಿಯ ಅಧ್ಯಯನವೇ ತೆರೆದ ವ್ಯವಸ್ಥೆಯ ಅಧ್ಯಯನ.

ಒಂದು ಸಂಸ್ಥೆಯು ಹೊರಗಿನ ಜಗತ್ತಿನೊಡನೆ ವ್ಯವಹರಿಸಬೇಕು ಹಾಗು ಹೊರಗಿನ ಬದಲಾವಣೆಗಳಿಗೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು. ಹೀಗಾಗಿ ತೆರೆದ ವ್ಯವಸ್ಥೆಯೆಯ ಅಧ್ಯಯನ ಬಹಳ ಸಂಕೀರ್ಣವಾದುದು ಆದರೆ ಒಳಗಿನ ಆಂತರಿಕ ಚಿಕ್ಕ ಚಿಕ್ಕ ಸಂಸ್ಥೆಗಳ ಅಧ್ಯಯನವೇ ಒಟ್ಟಾಗಿ ತೆರೆದ ವ್ಯವಸ್ಥೆಯ ಅಧ್ಯಯನವಾಗುವುದು.

ಈ ಮುಂದಿನ ಅಂಕಣದಲ್ಲಿ ಈ ಅಂಕಣದ ನಿಜ ಚಿತ್ರಣವನ್ನು ನೋಡಿ ಸಮರ್ಪಕವಾಗಿ ಅರಿಯೋಣ.

ಆಂಗ್ಲ ಅಂಕಣ:
http://somanagement.blogspot.com/2011/09/organization-theory-3.html

No comments:

Post a Comment