Monday, October 3, 2011

ಸಾಂಸ್ಥಿಕ ಸಿದ್ಧಾಂತ - ೧

ಹಿಂದಿನ ಅಂಕಣದಲ್ಲಿ ನಾವು ನ ಉದ್ದೇಶಗಳ ಬಗ್ಗೆ ಕಲಿತೆವು ಜೊತೆಗೆ ಇದು ನಿರ್ಧಾರಗಳನ್ನು ತೆಗೆದುಕೊಳ್ಳಲು ವಹಿಸುವ ಪಾತ್ರದ ಬಗ್ಗೆ ಕೂಡ ನೋಡಿದೆವು. ಇಂದಿನ ಅಂಕಣದಿಂದ ನಾವು ನಮ್ಮ ಈ ದಾರಿಯನ್ನು ಬಿಟ್ಟು ಮುಂದೆ ಸಾಂಸ್ಥಿಕ ಸಿದ್ಧಾಂತ (Organization Theory) ಬಗ್ಗೆ ಚರ್ಚಾ ಸರಣಿಯನ್ನು ಶುರು ಮಾಡೋಣ. ಇದರಿಂದ ಮುಂದಿನ ಆರ್ಥಿಕತೆ (Finance) ಸೇರಿದಂತೆ ಇತರ ವಿವಿಧ ವಿಚಾರಗಳ ಚರ್ಚೆಯನ್ನು ಮಾಡಲು ಅನುಕೂಲವಾಗುತ್ತದೆ. 

ಸಾಂಸ್ಥಿಕ ಸಿದ್ಧಾಂತಗಳ ಬಗ್ಗೆ ಮುಂದುವರಿಯುವ ಮುಂಚೆ ಮೊದಲು ನಾವು "ಸಂಸ್ಥೆ" ಎನ್ನುವುದರ ವ್ಯಾಖ್ಯಾನ ಮಾಡಿಕೊಂಡು ಅರಿತು ಮುಂದುವರಿಸೋಣ. ಇಂದಿನ ಅಂಕಣದಲ್ಲಿ ಈ ಬಗ್ಗೆಯೇ ತಿಳಿಯೋಣ.

ಪ್ರತಿ ದಿನ ನಾವು ಬೇರೆ ಬೇರೆ ರೀತಿಯ ಸಂಸ್ಥೆಗಳನ್ನು ನಾವು ಕೇಳುತ್ತೇವೆ, ಅವು ಶಾಲೆಗಳು, ಆಸ್ಪತ್ರೆಗಳು, ಇನ್ಫೋಸಿಸ್ ಇತ್ಯಾದಿ. ಇವೆಲ್ಲವೂ ಕೆಲವು ಅಂಶಗಳನ್ನು ಸಾಮಾನ್ಯವಾಗಿ ಹೊಂದಿದೆ. ಅವುಗಳು
೧. ಸಾಮಾಜಿಕವಾದ ಒಂದು ಘಟಕ
೨. ಗುರಿಯ ಕಡೆಗೆ ನಡೆಯುವುದು.
೩. ಒಂದು ಕ್ರಮ ಬದ್ಧ ಮತ್ತು ಸಮನ್ವಯ ಹೊಂದಿರುವ ಚಟುವಟಿಕೆಗಳಿಂದ ರೂಪಿಥವಗಿರುವುದು.
೪. ಹೊರಗಿನ ಪರಿಸರದೊಂದಿಗೆ ಸಂಬಂಧವನ್ನು ಹೊಂದಿರುವುದು.

ಸಾಮಾನ್ಯವಾಗಿ ಎಲ್ಲ ಸಂಸ್ಥೆಗಳು ತಮ್ಮದೇ ಅದೇ ನೀತಿ ನಿಯಮಾವಳಿಗಳನ್ನು ಹೊಂದಿರುವುದು. ಈ ಮೂಲಕ ತಮ್ಮ ಕಾರ್ಯ ಕ್ಷೇತ್ರವನ್ನು ಹಿರಿದು ಮಾಡಿಕೊಂಡು ಅಭಿವೃದ್ಧಿ ಹೊಂದುವುದು. ಹೀಗಿದ್ದರೂ ಅದರಲ್ಲಿರುವ ವ್ಯಕ್ತಿಗಳೇ ಒಂದು ಸಂಸ್ಥೆಯನ್ನು ನಿಜವಾಗಿ ನಡೆಸುವವರು. ಅವರ ನಡುವಿನ ವ್ಯವಹಾರ, ಸಂಬಂಧಗಳು, ಚಟುವಟಿಕೆಗಳು ಇತ್ಯಾದಿ ಎಲ್ಲ ಸೇರಿ ಒಂದು ಗುರಿಯೆಡೆಗೆ ಸಾಗಿ ಪಡೆಯಲು ಸಾಧ್ಯವಾಗುವುದು. ಈ ಕುರಿತಾಗಿಯೇ ಸಾಂಸ್ಥಿಕ ಸಿದ್ಧಾಂತವು ಇರುವುದು. 

ಇನ್ನು ಮುಂದಿನ ಅಂಕಣಗಳಲ್ಲಿ ಈ ಬಗ್ಗೆಯೇ ನೋಡೋಣ.

ಆಂಗ್ಲ ಅಂಕಣ:
http://somanagement.blogspot.com/2011/09/organization-theory-1.html

No comments:

Post a Comment