Pages

Thursday, February 10, 2011

ಮ್ಯಾನೇಜ್ಮೆಂಟ್ ನಿಜಾರ್ಥದಲ್ಲಿ ಏನು?

ಸರ್ವೇಸಾಮಾನ್ಯವಾಗಿ "ಇದನ್ನ ಮ್ಯಾನೇಜ್ ಮಾಡ್ಕೋ, ನಾನೀಗ ಬರ್ತೀನಿ" ಅಂತ ಹೇಳೋದನ್ನ ಕೇಳಿರ್ತಿವಿ; ನಿಜಾರ್ಥದಲ್ಲಿ ನಾವು ಹೇಳೋದಾದರೂ ಏನು?

ಕೂಲಂಕುಷವಾಗಿ ಗಮನಿಸಿದಾಗ ನಾವು ಹೇಳಲು ಇಚ್ಚಿಸ್ತಿರೋದು "ಸದ್ಯಕ್ಕೆ ನೀನೇ ಸಂಧರ್ಭಾನುಸರ ಸೂಕ್ತವಾದ ವ್ಯವಸ್ತೆ ಮಾಡಿಕೊಂಡು ನಿಭಾಯಿಸು " ಎಂದು. ಆ ಅರ್ಥದಲ್ಲಿ ಮ್ಯಾನೆಜ್ಮೆಂಟನ್ನು ವ್ಯವಸ್ಥೆ ನಿಭಾಯಿಸುವುದು ಎಂದು ಕರಿಬೋದು. ಇನ್ನು ಗಹನವಾಗಿ ಸುವ್ಯವಸ್ಥೆಗಾಗಿ ಮಾಡುವ ನಿರ್ಧಾರಗಳೇ ನಿಜಾರ್ಥದಲ್ಲಿ ಮ್ಯಾನೇಜ್ಮೆಂಟ್.

ಹಾಗಾದ್ರೆ, ನಿರ್ಧಾರ ತೆಗೆದುಕೊಳ್ಳೋದು ಅಷ್ಟು ಕಷ್ಟನಾ?

ಹೌದು, ದಲ್ಲಿ ಹೇಳಿಕೊಡುವಂತೆ ಸಂಪೂರ್ಣ ಮಾಹಿತಿ, ನಿಜ ಜೀವನದಲ್ಲಿ ಎಲ್ಲ ಮಾಹಿತಿಗಳು ಲಭ್ಯವಿರದು ಹಾಗಾಗಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟದ ಕಾರ್ಯವೇ ಸರಿ. ನಿರ್ಧಾರ ತೆಗೆದುಕೊಳ್ಳುವವರಿಗೆ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಅವಕಾಶಗಳಿರುತ್ತವೆ / ಆಯ್ಕೆಗಳಿರುತ್ತವೆ. ಪ್ರತೀ ಆಯ್ಕೆಯಲ್ಲೂ ಒಂದು ಪಕ್ಷವನ್ನು ಮೇಲೇರಿಸಿದರೆ ಮತ್ತೊಂದನ್ನು ಕೆಳಗಿಳಿಸಬೇಕಾಗುತ್ತದೆ; ಒಂದೇ ವ್ಯವಸ್ತೆಯ ಮೂಲಕ ಇಬ್ಬರುನ್ನು ಸಮ ಮಟ್ಟಕ್ಕೆ ತರುವುದು ಕಷ್ಟಸಾಧ್ಯವಾದ ಕಾರ್ಯ - ಇದನ್ನು ಪೆರೋಟೋಸ್ ಪ್ರಿನ್ಸಿಪಲ್ ಅಥವಾ ಟ್ರೆಡ್-ಆಫ್ ಅನ್ನುತ್ತಾರೆ. ನಾವಿದನ್ನು ದ್ವಂದ್ವ ಅಂತ ಕರೆಯಬಹುದು.

ಇಂತಹ ದ್ವಂದ್ವಗಳ ನಿವಾರಣೆಯೇ ವ್ಯವಸ್ಥಾಪ್ರಬಂಧಕನ ಆಧ್ಯ ಕೆಲಸ. ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಂಡು ಕಂಪನಿಗಳು ಹಾಗು ವಾಣಿಜ್ಯ ಸಂಸ್ಥೆಗಳೆನ್ನುವ ಹಡಗನ್ನು ನಿಭಾಯಿಸುವುದೇ ಮ್ಯಾನೇಜ್ಮೆಂಟಿನ ಅಂತರಾಳ. ಯಶಸ್ವೀ ವ್ಯವಸ್ಥಾಪಕ ಪ್ರಭಂಧಕನಾಗ ಬೇಕೆಂದಿರುವವರು ನಿರ್ಧರಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಬಹು ಮುಖ್ಯವಾದುದು.

No comments:

Post a Comment