Pages

Friday, February 11, 2011

ವ್ಯವಹಾರಂಗಗಳು

ವಾಣಿಜ್ಯ ಸಂಸ್ಥೆಯ ವಿವಿಧ ಕಾರ್ಯಗಳನ್ನು ನಡೆಸುವ ವ್ಯವಹಾರದ ವಿಭಾಗಗಳಿಗೆ ವ್ಯವಹಾರಂಗವೆನ್ನುವರು,
ಯಾವುವೆ ಸಂಸ್ಥೆಯನ್ನು ಗಮನಿಸಿದಾಗ ಅವುಗಳಲ್ಲಿ ಕಡ್ಡಾಯವಾಗಿ ಕೆಳಗಂಡ ಅಂಗಗಳಿವೆಯೆಂದು ಅರಿವಾಗುತ್ತದೆ.
  • ವಿಕ್ರಯ ಹಾಗು ಸೇವೆ [Sales and Service]: ಗ್ರಾಹಕರಿಗೆ ಅತೀ ಸಾಮಿಪ್ಯದಲ್ಲಿರುವ ವಿಭಾಗ. ಇದು ಪ್ರತಿ ವಾಣಿಜ್ಯ ಸಂಸ್ಥೆಯ ಚಾಲನೆಗೆ ಬಹುಮುಖ್ಯವಾದುದು.
  • ಮಾರಟಗಾರಿಕೆ [Marketing]: ಸಂಸ್ಥೆ ಹಾಗು ಸಂಸ್ಥೆಯ ಉತ್ಪತ್ತಿಯನ್ನು ಗ್ರಾಹಕರಿಗೆ ಮನದಟ್ಟು ಮಾಡುವುದು ಇದರ ಪ್ರಮುಖ ಧ್ಯೇಯ.
  • ಮಾನವ ಸಂಪನ್ಮೂಲ ಹಾಗು ಕಾರ್ಯಭಾರ[Human Resource & Admin]: ಸಂಸ್ಥೆಯ ನಿಜಸ್ವತ್ತು ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳು; ದಿನನಿತ್ಯದ ಕಾರ್ಯಗಳ ವಹಿವಾಟುಗಳನ್ನೂ ನೋಡಿಕೊಳ್ಳುವುದು..
  • ಅನ್ವೇಷಣೆ ಹಾಗು ಅಭಿವೃದ್ಧಿ[Research & Development]: ಬದಲಾಗುತ್ತಿರುವ ಕಾಲದಲ್ಲಿ ಉತ್ಪನ್ನಗಳನ್ನು ನಿರಂತರ ಸುಧಾರಣೆ, ಅವಿಷ್ಕಾರ ಮತ್ತು ಅಭಿವೃದ್ಧಿ ಬಹುಮುಖ್ಯವಾದುದು. ಗ್ರಾಹಕರನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವುದು ಈ ವಿಭಾಗದ ಕಾರ್ಯ.
  • ಕ್ರಿಯಾಶಸ್ತ್ರ ಹಾಗು ಉತ್ಪಾದನೆ[Operation & Production]: ಉತ್ಪಾನ್ನಗಳ ತಯಾರಿಕೆಯನ್ನು ಸುಲಲಿತವಾಗಿ ಮತ್ತು ಕುಶಲತೆಯಿಂದ ಸರಿಯಾದ ಸಮಯಕ್ಕೆ ಮಾಡುವುದು ಈ ವಿಭಾಗದ ಕರ್ತವ್ಯ. ಸಂಸ್ಥೆಯ ಉತ್ಪಾದನೆಗೆ ಬಹಳ ಪ್ರಮುಖವಾದ ವಿಭಾಗ.
  • ಮಾಹಿತಿ ತಂತ್ರಜ್ಞಾನ[Information Technology]: ಕೈಗಾರಿಕೆ ಅಥವಾ ಸಂಸ್ಥೆಯಲ್ಲಿ ಜರುಗುವ ಎಲ್ಲ ಕಾರ್ಯಗಳ ಮೇಲ್ವಿಚಾರಣೆ ಮತ್ತು ತ್ವರಿತ ನಿರ್ಧಾರಕ್ಕೆ ಮಾಹಿತಿ ಸಂಗ್ರಹಣೆ ಹಾಗು ಅದರ ಪ್ರಬಂಧನೆ ಈ ವಿಭಾಗದ ಕಾರ್ಯ ಚಟುವಟಿಕೆ.
  • ಹಣಕಾಸು ಮತ್ತು ಲೆಕ್ಕಾಚಾರ[Accounting and Finance]: ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ನೋಡಿಕೊಳ್ಳುವುದು ಮತ್ತು ಉತ್ಪನ್ನಗಳಿಗೆ ಸರಿಯಾದ ಹಣಕಾಸಿನ ವ್ಯವಸ್ಥೆ ಮಾಡುವುದು ಇದರ ಮೂಲ ಕಾರ್ಯ
ಮೇಲ್ಕಂಡ ವ್ಯವಹಾರಂಗಗಳನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದ್ದೇನೆ.


ಪ್ರತೀ ಸಂಸ್ಥೆಯಲ್ಲೂ ಇಂತಹ ವ್ಯವಹರಂಗಳಿರುತ್ತವೆ , ಆದರೆ ಆ ಸಂಸ್ಥೆಯ ಪ್ರಮುಖವಾದ ಕಾರ್ಯಕ್ಷೇತ್ರದ ಮೇಲೆ, ಇವುಗಳಲ್ಲಿ ಯಾವುದು ಮತ್ತೊಂದಕ್ಕಿಂತ ಹೆಚ್ಚು ಮುಖ್ಯಯೆನ್ನುವುದು ನಿರ್ಧಾರವಾಗುತ್ತದೆ. ಉದಾಹರಣೆಗೆ:
"ಬ್ಯಾಂಕ್" ಗಳಲ್ಲಿ ಮಾರಟಗರಿಕೆಗಿಂತಲೂ ಹಣಕಾಸು ಮತ್ತು ಮಾಹಿತಿ ತಂತ್ರಜ್ನ್ಯಾನ ಮುಖ್ಯ ಪಾತ್ರ ವಹಿಸುತ್ತದೆ.

No comments:

Post a Comment