Pages

Monday, February 21, 2011

ಬೇಡಿಕೆ ಮತ್ತು ಪೂರೈಕೆ ಚರ್ಚೆ- ೨

ಈ ಮುಂಚಿನ ಬೇಡಿಕೆ ಮತ್ತು ಪೂರೈಕೆ ಕುರಿತ ಅಂಕಣದಲ್ಲಿ ಗ್ರಾಹಕ ಮತ್ತು ವರ್ತಕರು, ಬೆಲೆ ಮತ್ತು ಅದರಿಂದ ಕೊಂಡುಕೊಳ್ಳುವ ವಸ್ತುಗಳ ಸಂಬಂಧದಲ್ಲಿ ಅವರ ವರ್ತನೆಯನ್ನು ಗಮನಿಸಿದೆವು. ಇಂದಿನ ಅಂಕಣದಲ್ಲಿ ಇವರಿಬ್ಬರು ಕೂಡಿದಾಗ ಆ ವಸ್ತುವಿನ ದರ ಹೇಗೆ ನಿರ್ಧಾರವಾಗುವುದು ಎಂದು ತಿಳಿದುಕೊಳ್ಳೋಣ. ಇದಕ್ಕಾಗಿ ಈ ಕೆಳಗಿನ ಸನ್ನಿವೇಶವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ.

ನಿಂಬೆಹಣ್ಣನ್ನು ಕೊಂಡುಕೊಳ್ಳಲೆಂದು ನಾನು ರೂ. ೧೦ನ್ನು ತೆಗೆದುಕೊಂಡು ನಡೆದೆ. ಕಳೆದಬಾರಿ ನಾನು ಮಾರುಕಟ್ಟೆಗೆ ಹೋದಾಗ, ಒಂದು ನಿಂಬೆಹಣ್ಣಿಗೆ ರೂ. ೨ ಇದ್ದಿತು. ಆ ಲೆಕ್ಕದಲ್ಲಿ ನನಗೆ ೫ ನಿಂಬೆಹಣ್ಣು ಸಿಗಬಹುದೆಂದುಕೊಂಡು ನಡೆದೆ. ಮಾರುಕಟ್ಟೆಯೆಲ್ಲಾ ಅಲೆದರೂ ನಮಗೆ ಸಿಕ್ಕಿದ್ದು ಬರೀ ಒಬ್ಬನೆ ವರ್ತಕ. ಆವನು, ಒಂದು ಹಣ್ಣಿಗೆ ರೂ ೪ ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಸ್ವಲ್ಪ ಚರ್ಚೆ ನಡೆದಮೆಲೆ ನನಗೆ ರೂ. ೩ ರಕ್ಕೆ ಒಂದು ಹಣ್ಣಿನಂತೆ ನೀಡಲು ಒಪ್ಪಿಕೊಂಡ. ರು ೧೦ಕ್ಕೆ, ೫ ಹಣ್ಣು ಸಿಗಬಹುದೆಂದುಕೊಂಡ ನನಗೆ ೩ ಹಣ್ಣು ಸಿಕ್ಕವು; ೨ ಹಣ್ಣು ಮಾರಬಹುದೆಂದು ಕೊಂಡ ವರ್ತಕನು ೩ ಹಣ್ಣಿಗೆ ಒಪ್ಪಿಕೊಂಡನು.

ನಾವಿಬ್ಬರೂ ಒಪ್ಪಿಕೊಂಡ ಈ ಬೆಲೆಗೆ "ಸಮಾನಾಂತರ ಬೆಲೆ" ಎಂದು ಕರೆಯುತ್ತೆವೆ. ಈ ಬೆಲೆಗೆ ವರ್ತಕ ಮತ್ತು ಗ್ರಾಹಕ ಇಬ್ಬರು ಒಪ್ಪಿಕೊಂಡು ವ್ಯವಹಾರ ನಡೆಸಲು ನಿಶ್ಚಯಿಸಿರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ನಾನು ರೂ. ೨ ರಿಂದ ಬೆಲೆ ಹೆಚ್ಚದಂತೆ ಬರಿ ೩ ನಿಂಬೆಹಣ್ಣು ಕೊಳ್ಳಲು ಸಮರ್ಥನಾದೆ, ಇದಕ್ಕಿಂತ ಜಾಸ್ತಿ ವ್ಯಯಮಾಡಲು ನಾನು ತಯಾರಿರಲಿಲ್ಲ; ಅಂತೆಯೆ, ವರ್ತಕನು ರೂ. ೪ರಿಂದ ಕೆಳಕ್ಕೆ ರೂ. ೩ರ ವರೆಗೆ ಬಂದನು, ಇದಕ್ಕಿಂತ ಕೆಳಗಿಳಿಯಲು ಅವನು ತಯಾರಿರಲಿಲ್ಲ. ಹಾಗಾಗಿ, ರೂ.೩ರಿಗೆ ಇಬ್ಬರೂ ಒಪ್ಪಿಕೊಂಡು ವ್ಯವಹಾರ ನಡೆಸಿದೆವು. ನಾವಿಬ್ಬರೂ ನಮ್ಮ ನಮ್ಮ ಬೆಲೆಯ ಮೊತ್ತದಿಂದ ಅಲುಗಾಡಲು ತಯಾರಿರಲಿಲ್ಲದಿದ್ದರೆ, ಈ ವ್ಯವಹಾರ ಕುದುರುತ್ತಲೇ ಇರಲಿಲ್ಲ. ವ್ಯವಹಾರ ಕುದುರ ಬೇಕಾದಲ್ಲಿ ಸರಿಯಾದ ಸಮಾನಾಂತರ ಬೆಲೆಯನ್ನು ಕಂಡುಕೊಳ್ಳುವುದು ಬಹುಮುಖ್ಯ.

ಮುಂದಿನ ಈ ಶ್ರೇಣಿಯ ಅಂಕಣದಲ್ಲಿ, ನಿರ್ಧಾರ ತೆಗೆದುಕೊಂಡ ಬಗೆಯನ್ನು ಕೂಲಂಕುಷವಾಗಿ ಗಮನಿಸೋಣ.

ಇದರ ಆಂಗ್ಲ ಅಂಕಣ ಓದಿ:http://somanagement.blogspot.com/2011/02/demand-and-supply-discussion-2.html

No comments:

Post a Comment