Wednesday, March 30, 2011

ವ್ಯವಹಾರ ಪ್ರತಿಕೃತಿ ಚರ್ಚೆ - ಮಧ್ಯವರ್ತಿಗಳ ಕಡಿತ (ಡಿಸ್-ಇಂಟರ್ಮೀಡಿಯೇಷನ್)

ವಿತರಣೆಯ ಈ ಹಿಂದಿನ ಅಂಕಣದಲ್ಲಿ ಅದರ ಮಹತ್ವವನ್ನು ತಿಳಿದುಕೊಂಡೆವು. ವಿತರಣೆಯ ಈ ಮಹತ್ವವನ್ನು ಕಂಡಾಗ, ಕಂಪನಿಗಳ ಸಪ್ಲೈ ಚೈನ್ ಮೇಲೆ ಅದು ಬೀರುವ ಪ್ರಭಾವವೂ ಹೆಚ್ಚಿರುತ್ತದೆ. ಹೀಗಿದ್ದಾಗ ತಯಾರಿಸಿದ ವಸ್ತುವನ್ನು ಖರೀದಿಸಲು ಬರುವ ಗ್ರಾಹಕರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಹೀಗಿದ್ದಲ್ಲಿ ಈ ವಿತರಣಾ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳನ್ನು ಆದಷ್ಟು ಕಡಿಮೆ ಮಾಡಿದರೆ ಗ್ರಾಹಕರೂ ಕಡಿಮೆ ವ್ಯಯ ಮಾಡುವ ಹಾಗಾಗುತ್ತದೆ.

ಡೆಲ್ - ಇಂತಹ ಮಧ್ಯವರ್ತಿಗಳನ್ನು ಹೊರಹಾಕಿ ಗ್ರಾಹಕರಿಗೆ ಕೇವಲ ಲಾಭವನ್ನಷ್ಟೇ ಮಾಡಿಕೊಡಲಿಲ್ಲ, ಅದರೊಂದಿಗೆ ಅವರಿಗೆ ಬೇಕಾಗುವ ಬಣ್ಣ, ರಚನೆ, ಮತ್ತು ವಿನ್ಯಾಸಗಳನ್ನು ನೀಡುವಲ್ಲಿ ಸಫಲವಾಗಿದೆ. ಇದರಿಂದ ಗ್ರಾಹಕರು ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಮಧ್ಯವರ್ತಿಗಳ ಕಡಿತಗೊಳಿಸಿರುವ ವ್ಯವಹಾರ ಪ್ರತಿಕೃತಿಗಳು ಹಲವಾರಿವೆ, ಇದನ್ನು ನಾವು ಅತ್ಯಂತ ನಿಗಾವಹಿಸಿ ಮಾಡತಕ್ಕದ್ದು ಇಲ್ಲದಿದ್ದಲ್ಲಿ ಮಧ್ಯವರ್ತಿಗಳು ತಿರುಗು ಬೀಳುವ ಸಂಭವ ಹೆಚ್ಚಿರುತ್ತದೆ.

No comments:

Post a Comment