Friday, September 30, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೩೪

ಹಿಂದಿನ ಅಂಕಣದಲ್ಲಿ  ನಾವು PnL ನ ಮುಖ್ಯ ಶೀರ್ಷಿಕೆಗಳ ಬಗ್ಗೆ ಅರಿಯಲು ಆರಂಭಿಸಿದೆವು. ಇಂದಿನ ಅಂಕಣದಲ್ಲಿ ಅದನ್ನೇ ಮುಂದುವರಿಸೋಣ. 

ನ ಬಗ್ಗೆ ಚರ್ಚೆಯನ್ನು ಮುಂದುವರಿಸುತ್ತಾ ಹೇಗೆ ಈ ಆದಾಯವು ಕಂಪನಿಯ ಕಾರ್ಯಗಳಿಂದ ಉಂಟಾಗುವುದು ಎಂದು ಅರಿಯೋಣ. ಆದರೆ ಕಂಪನಿಯು ಬ್ಯಾಂಕ್ ಗಳಲ್ಲಿ ಇಟ್ಟ ಹಣದಿಂದ ಕೂಡ ಬಡ್ಡಿಯ ರೂಪದಲ್ಲಿ ಆದಾಯ ಸಿಗುವುದು. ಇದನ್ನು ಕೂಡ ಪರಿಗಣಿಸಬೇಕು. ಇದನ್ನು "Other Incomes" ನ ಶೀರ್ಷಿಕೆಯಲ್ಲಿ ತೋರಿಸುವರು. ಇದರ ಜೊತೆಗೆ ಯಾವುದಾದರು ಆಸ್ತಿಯನ್ನು ಒಮ್ಮೆ ಮಾರಿದರೆ ಅದನ್ನು ಬೇರೆಡೆ ತೋರಿಸುವುದಿಲ್ಲ. ಹಾಗಾಗಿ ಅದನ್ನು "Extraordinary Income" ಶೀರ್ಷಿಕೆಯ ಅಡಿಯಲ್ಲಿ ತೋರಿಸುವರು. 

ಈಗ ನಾವು ಕಂಪನಿಯ ಎಲ್ಲ ರೀತಿಯ ಆದಯಗಳನ್ನು ಒಟ್ಟುಗೂಡಿಸಿದೆವು. ಇದನ್ನು ಒಟ್ಟಾಗಿ "Earnings before Interest and Taxes" ಎಂದು ಕರೆಯುವರು. ಇದನ್ನೇ ಚಿಕ್ಕದಾಗಿ "EBIT" ಹೀಗೆ ಉಪಯೋಗಿಸುವರು. ಈ ಹೆಸರು ಬರಲು ಕಾರಣವು ಕೂಡ ಸರಳವಾಗಿ ಅರಿವಾಗುವುದು. ಏಕೆಂದರೆ ನಾವು ಕಂಪನಿಯು ತೆರ ಬೇಕಾದ ತೆರಿಗೆ ಮತ್ತು ಬಡ್ಡಿಯನ್ನು ಇನ್ನು ಪರಿಗಣಿಸಿಲ್ಲ. 

ಕಂಪನಿಯು ಸಾಲವಾಗಿ ಪಡೆದ ಹಣದ ಬಡ್ಡಿಯನ್ನು ಆದಾಯದಿಂದ ಕಳೆಯಬೇಕು. ಹೀಗೆ ಕಳೆದು ಸಿಗುವುದಕ್ಕೆ  Net profit before tax - NPBT ಎಂದು ಕರೆಯುವರು. ಕೊನೆಯಲ್ಲಿ ತೆರಿಗೆಯನ್ನು ಕಳೆದ ಮೇಲೆ ಉಳಿಯುವ ಲಾಭವನ್ನು ನಿವ್ವಳ ಲಾಭ Net profit after tax - NPAT ಎಂದು ಕರೆಯುವೆವು. 

ಈ ಉಳಿದ ಲಾಭದ ಹಣದಲ್ಲಿ ಸ್ವಲ್ಪ ಭಾಗವನ್ನು ಡಿವಿಡೆಂಡ್ ಗಳನ್ನು ನೀಡಲು ಉಪಯೋಗಿಸುವರು. ಆದರೆ ಇದು ಶೇರ್ ದಾರರ ವಾರ್ಷಿಕ ಸಭೆಯಲ್ಲಿ ನಿರ್ಧಾರ ವಾಗಿರಬೇಕು, ಇದಲ್ಲದಿದ್ದರೆ ಇದನ್ನು Retained Earnings ನ ಶೀರ್ಷಿಕೆಯಲ್ಲಿ ಇಡುವರು.

ಆಂಗ್ಲ ಅಂಕಣ:
http://somanagement.blogspot.com/2011/08/finance-and-management-34.html



No comments:

Post a Comment