Wednesday, June 1, 2011

ವ್ಯಾವಹಾರಿಕ ಯುಕ್ತಿ - ೮

ನಾವು ಈ ಹಿಂದೆ ಕೆಲವು ನಿಜ ಜೀವನದ ಸಣ್ಣ ಮಾದರಿ ಘಟನೆಗಳನ್ನು ನೋಡಿ, ಹೇಗೆ ಕಂಪನಿಗಳು ವ್ಯಾವಹಾರಿಕ ಯುಕ್ತಿ ಮತ್ತು ಗುರಿಗಳನ್ನು ಹೇಗೆ ಅಳವಡಿಸಿಕೊಳ್ಳುವರು ಎಂಬುದನ್ನ ಅರಿತೆವು. ಈ ರೀತಿ ಮಾದರಿ ಕತೆಗಳ ಮೂಲಕ ವ್ಯಾವಹಾರಿಕ ಯುಕ್ತಿಯ ಬಗ್ಗೆ ಅರಿಯುವುದು ಸಾಮಾನ್ಯವಾದ ವಿಚಾರವಾಗಿದೆ.

ವಿದ್ಯಾರ್ಥಿಗಳು ಅಥವಾ ಸಂಶೋಧಕರು ಒಂದು ಸಂಸ್ಥೆಯ ಬಗ್ಗೆ ಅಧ್ಯಯನ ಮಾಡುವಾಗ ಸಾಮಾನ್ಯವಾಗಿ ಈಗಿರುವ ಪ್ರಮುಖ ಸನ್ನಿವೇಶದಲ್ಲಿ ಅವರು ಅತ್ಯುತ್ತಮ ವ್ಯಾವಹಾರಿಕ ಅಭ್ಯಾಸಗಳನ್ನು ಹುಡುಕುವರು. ಈ ರೀತಿಯ ಅಧ್ಯಯನವನ್ನು ಸಾಮಾನ್ಯವಾಗಿ ಒಂದು ಚೌಕಟ್ಟಿನ ಒಳಗೆ ಅಳವಡಿಸುವರು.

ವ್ಯಾವಹಾರಿಕ ಯುಕ್ತಿಯ ಬಗೆಗಿನ ಅಧ್ಯಯನದಲ್ಲಿ ಈ ಮೇಲೆ ಹೇಳಿದ ಚೌಕಟ್ಟುಗಳು ಆರಂಭಿಕ ಮಾನಸಿಕ ಅರಿವನ್ನು ಪಡೆಯಲು ಸಹಾಯ ಮಾಡುವುದು. ಆ ಮೂಲಕ ನಾವು ಅಧ್ಯಯನವನ್ನು ನಡೆಸಿ ಒಂದು ಸಂಸ್ಥೆಯ ಯಶಸ್ಸು ಅಥವಾ ದುರ್ಗತಿಗಳ ಕಾರಣಗಳ ಬಗ್ಗೆ ಅರಿಯಬಹುದು.

ಇನ್ನು ಮುಂದಿನ ಅಂಕಣಗಳಲ್ಲಿ ನಾವು ಕಲಿತ ಕೆಲವು ಪ್ರಮುಖವೆನಿಸಿದ ಚೌಕಟ್ಟುಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಆ ಮೂಲಕ ಈ ಚೌಕಟ್ಟುಗಳು ನಿಮ್ಮೊಡನೆ ಇದ್ದು ವ್ಯಾವಹಾರಿಕ ಯುಕ್ತಿಯ ನಿಮ್ಮ ಅಧ್ಯಯನಗಳಿಗೆ ಸಹಕಾರಿಯಾಗುವುದೆಂದು ನಮ್ಮ ಆಶಯ.

No comments:

Post a Comment