Wednesday, June 1, 2011

ವ್ಯಾವಹಾರಿಕ ಯುಕ್ತಿ - ೧೧

ಈ ಹಿಂದಿನ ಅಂಕಣದಲ್ಲಿ ನಾವು ಸ್ಪರ್ಧಾತ್ಮಕ ಲಾಭದ ಬಗ್ಗೆ ಹೇಳಿದೆವು. ಇಂದು ನಾವು ಸ್ಪರ್ಧಾತ್ಮಕ ಸಮಾನತೆಯ ಬಗ್ಗೆ ಅರಿಯೋಣ.

ಒಂದು ಕಂಪನಿಯ ಸ್ಪರ್ಧಾತ್ಮಕ ಯುಕ್ತಿಯು ಸ್ಪರ್ಧಾತ್ಮಕ ಸಮಾನತೆಯನ್ನು ಸೃಷ್ಟಿಸಿದೆ ಎಂದು, ಆ ಯುಕ್ತಿಯ ಮೂಲಕ ಕೇವಲ ಅರ್ಥಿಕ ಮೌಲ್ಯವಷ್ಟೇ ಹೆಚ್ಚಾದಾಗ ಕರೆಯುತ್ತಾರೆ. ಯಾಕೆಂದರೆ ಇದೆ ರೀತಿಯ ಯುಕ್ತಿಯನ್ನು ಇನ್ನು ಹಲವರು ಅಳವಡಿಸಿ ಕೊಳ್ಳುವರು. ಒಂದು ಕಂಪನಿಯು ಸ್ಪರ್ಧಾತ್ಮಕ ಸಮಾನತೆಯನ್ನು, ಅದರ ಸ್ಪರ್ಧಿಸುವ ವಿಧಾನವು ಉದ್ಯಮ ಅಥವಾ ಮಾರುಕಟ್ಟೆಯ ಆರ್ಥಿಕ ಕಾರ್ಯ ವಿಧಾನಗಳಡಿಯಲ್ಲಿಯೇ ಇದ್ದಾಗ ಪಡೆಯುವುದು. ಆ ವಿಧಾನವನ್ನು ಇತರ ಕಂಪನಿಗಳು ಅರಿತು ಅವುಗಳೂ ಕೂಡ ಅಳವಡಿಸಿಕೊಳ್ಳುವುವು.

ನಾವು ಇಲ್ಲಿ ಮತ್ತೊಮ್ಮೆ ಹೋಂಡ ಕಂಪನಿಯ ಉದಾಹರಣೆಯನ್ನು ತೆಗೆದುಕೊಂಡು ಈ ವಿಚಾರವನ್ನು ಅರಿಯಬಹುದು. ಹೋಂಡ ಕಂಪನಿಯ ಆರಂಭಿಕ ಸ್ಪರ್ಧಾತ್ಮಕ ವಿಧಾನವು ಸರಿಯಾಗಿದ್ದರೂ ಅದು ಕೇವಲ ಸ್ಪರ್ಧಾತ್ಮಕ ಸಮಾನತೆಯನ್ನು ಸಾಧಿಸುತ್ತಿತ್ತೆ ಹೊರತು ಇಂದಿನಂತೆ ಸ್ಪರ್ಧಾತ್ಮಕ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ

No comments:

Post a Comment