Friday, July 29, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೯

ಈ ಹಿಂದಿನ ಅಂಕಣದಲ್ಲಿ ನಾವು ಸರಕಿನ ಮೌಲ್ಯವನ್ನು ಅರಿಯುವ ಬಗೆಯನ್ನು ಒಬ್ಬ ಬಂಡವಾಳದಾರನ ದೃಷ್ಟಿಯಿಂದ ನೋಡಿದೆವು. ಇಂದು ಆಗಮಿಸಬೇಕಾದ ಆದಾಯ ವು ಯಾವ ಅರ್ಥವನ್ನು ಬಂಡವಾಳದಾರನಿಗೆ ನೀಡುವುದು ಎಂದು ಅರಿಯೋಣ.

ಆಗಮಿಸಬೇಕಾದ ಆದಾಯವೆಂದರೆ, ಹೆಸರೇ ಸೂಚಿಸುವಂತೆ ಬಾಕಿಯಿರುವ ಬಿಲ್ ಗಳು. ಕಂಪನಿಯು ಮಾರಾಟ ಮಾಡಿದ ಉತ್ಪನ್ನಗಳ ಬೆಲೆಯನ್ನು ಪಡೆಯದಿದ್ದರೆ ಅದು ಮೂರ್ಖತನವೇ ಸರಿ. ಕ್ರೆಡಿಟ್ ಕೊಡುವುದು ಇತ್ತೀಚಿನ ದಿನಗಳ ವ್ಯವಹಾರದ ಒಂದು ಭಾಗವೇ ಆಗಿದ್ದರೂ ತುಂಬ ಕ್ರೆಡಿಟ್ ಕೊಟ್ಟು ಹಣವನ್ನು ಪಡೆಯದೇ ಇರುವುದು ಕೂಡ ಸರಿಯಲ್ಲ. ಕಂಪನಿಯ ಆರ್ಥಿಕ ಗುಣಮಟ್ಟವನ್ನು ಅದು ಎಷ್ಟು ವೇಗವಾಗಿ ಬರಬೇಕಾಗಿರುವ ಆದಾಯಗಳನ್ನು ತೆಗೆದು ಕೊಳ್ಳುವರು ಎನ್ನುವುದರಿಂದ ಗೊತ್ತಾಗುವುದು. ಹಣ ತೆಗೆದುಕೊಳ್ಳುವ ಸಮಯವು ಹೆಚ್ಚಾಗುತ್ತಿದ್ದಲ್ಲಿ ಅದು ಶಾಶ್ವತ ಸಮಸ್ಯೆಯೆಡೆಗೆ ಕಂಪನಿಯು ಬೀಳುತ್ತಿದೆ ಎಂದರ್ಥ. ಗ್ರಾಹಕರಿಗೆ ಹೆಚ್ಚಿನ ಕ್ರೆಡಿಟ್ ಅವಧಿ ನೀಡುವುದು, ಮುಂದೆ ಅವರಿಂದ ಹಣ ಹಿಂದೆ ಬರದಿರುವ ಅಪಾಯವನ್ನೂ ತಂದೊಡ್ಡಬಹುದು. ಗ್ರಾಹಕನಿಗೆ ಹಣದ ಸಮಸ್ಯೆಯುಂಟಾಗಿ ಹಣವನ್ನು ಕೊಡಲು ಒಪ್ಪದಿರಬಹುದು. ಹಣ ತೆಗೆದುಕೊಳ್ಳುವ ಸಮಯವು ಕಂಪನಿಯ ಆಂತರಿಕ ವಹಿವಾಟಿನಲ್ಲೂ ಪ್ರಭಾವ ಬೀರಿ, ಕಂಪನಿಗೆ ನೌಕರರ ಸಂಬಳ, ಪೂರೈಕೆ ದಾರರಿಗೆ ಪಾವತಿ ಮಾಡಲು ಸಾಧ್ಯವಾಗದೆ ಅಗತ್ಯ ಬೇಕಾದ ಸರಕುಗಳನ್ನ ಖರೀದಿಸಲು ಸಾಧ್ಯವಾಗದೆ ಇರಬಹುದು.

ಇಲ್ಲಿಯೂ ಕೂಡ ಹಣವು ತುಂಬಾ ಚಲನಾತ್ಮಕವಾಗಿದ್ದು ಕಂಪನಿಯ ಆರ್ಥಿಕತೆಯಲ್ಲಿ ಎಷ್ಟು ಪ್ರಭಾವ ಬೀರುವುದೆಂದು ಅರಿವಾಗುವುದು.

ಆಂಗ್ಲ ಅಂಕಣ:
http://somanagement.blogspot.com/2011/07/finance-and-management-9.html

No comments:

Post a Comment