ಈ ಹಿಂದಿನ ಅಂಕಣದಲ್ಲಿ ಸೂಚಿಸಿದಂತೆ ೩ ಹಣಕಾಸಿನ ಹೇಳಿಕೆಗಳು ಕಂಪನಿಯ ಸ್ವರೂಪದ ಬಗ್ಗೆ ಮಾಹಿತಿಯನ್ನು ನೀಡಬಲ್ಲವು. ಇಲ್ಲಿ ನಾವು ಸೂಕ್ಷ್ಮವಾಗಿ ಇವುಗಳಿಂದ ಯಾವ ರೀತಿಯ ವಿಶ್ಲೇಷಣೆ ಮಾಡಬಹುದೆಂಬುದರ ಬಗ್ಗೆ ತಿಳಿಯೋಣ.
ಲೆಕ್ಕ ಪತ್ರ (Balance Sheet):
ಒಬ್ಬ ನೋಡುಗನಿಗೆ (ಬಂಡವಾಳದಾರ ಅಥವಾ ಭಾವೀ ಬಂಡವಾಳದಾರ) ಈ ಕೆಳಗಿನ ೩ ಮುಖ್ಯ ಮಾಹಿತಿ ನೀಡುವುದು.
೧. ಕಂಪನಿಯಲ್ಲಿ ಎಷ್ಟು ಸಂಪತ್ತಿದೆ?
೨. ಕಂಪನಿಗೆ ಎಷ್ಟು ಋಣವಿದೆ?
೩. ಕಂಪನಿಯ ಶೇರುದಾರರಿಗೆ ಎಷ್ಟು ಹಣ ಉಳಿಯುವುದು?
ಹಣದ ಹರಿಯುವಿಕೆಯ ಹೇಳಿಕೆ:
ಹಣವು ಎಲ್ಲೆಲ್ಲಿ ಖರ್ಚಾಗಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ನೋಡುಗನಿಗೆ ನೀಡುವುದು.
ಆದಾಯದ ಹೇಳಿಕೆ:
ಇದನ್ನು ಲಾಭ ಮತ್ತು ನಷ್ಟದ ಹೇಳಿಕೆ ಎಂದೂ ಕೂಡ ಕರೆಯುವರು. ಹಾಗಾಗಿ ಇದು ಕಂಪನಿಯ ಲಾಭ ಹೊಂದುವದರ ಬಗೆಗೆ ಹೇಳುವುದು. ಕಂಪನಿ ಎಷ್ಟು ಆದಾಯ ಗಳಿಸಿತು ಅಥವಾ ನಷ್ಟ ಮಾಡಿಕೊಂದಿತೆನ್ನುವುದರ ಬಗ್ಗೆ ಹೇಳುವುದು.
ಈ ಹಣಕಾಸಿನ ಹೇಳಿಕೆಗಳ ಮೂಲಕ ಕಂಪನಿಯಲ್ಲಿ ಬಂಡವಾಳ ತೊಡಗಿಸುವ ಅಥವಾ ಬೇರೆ ಏನಾದರು ಮಾಡುವ ನಿರ್ಧಾರವನ್ನು ಒಬ್ಬ ಬಂಡವಾಳದಾರ ಮಾಡಬಹುದು. ಒಬ್ಬ ವ್ಯವಸ್ಥಾಪಕನಿಗೆ ಈ ಕಂಪನಿಯ ಕಾರ್ಯ ನಿರ್ವಹಣೆಯ ವಿಶ್ಲೇಷಣೆಯು ಕಂಪನಿಯ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸುವುದು, ಶೇರು ಹೂಡಿಕೆದಾರರ ಅಭಿಪ್ರಾಯವನ್ನು ಅರ್ಥಮಾಡಿಸುವುದು ಜೊತೆಗೆ ಚಾಲಕಗಳನ್ನು ಹುಡುಕಿಸುವುದು ಮತ್ತು ಆ ಮೂಲಕ ಲಾಭಾಂಶ ಹೆಚ್ಚಿಸಲು ಅವುಗಳೊಂದಿಗೆ ಕಾರ್ಯ ನಿರ್ವಹಿಸಲು ತೊಡಗಿಸುವುದು.
No comments:
Post a Comment