Wednesday, August 17, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೨೩

ಹಿಂದಿನ ಅಂಕಣಲ್ಲಿ ಆರಂಭವಾದ ಪ್ರಾಶಸ್ತ್ಯದ ಶೇರ್ ಗಳ ವಿವಿಧ ಪ್ರಕಾರಗಳ ಚರ್ಚೆಯನ್ನೇ ಮುಂದುವರಿಸುತ್ತಾ ಇಂದು ನಾವು ಪುನಃ ಪ್ರಾಪ್ತಿಯಾಗುವ ಶೇರ್ ಮತ್ತು ಬದಲಾಯಿಸಲು ಸಾಧ್ಯವಾಗುವ ಶೇರ್ ಗಳ ಬಗ್ಗೆ ನೋಡೋಣ.

ಬಿಡಿಸಿ ಕೊಳ್ಳಬಹುದಾದ (Redeemable) ಮತ್ತು ಬಿಡಿಸಿ ಕೊಳ್ಳಲಾಗದ (Non - Redeemable) ಶೇರ್ ಗಳು:

ಬಿಡಿಸಿ ಕೊಳ್ಳಬಹುದಾದ ಶೇರ್ ಗಳೆಂದರೆ, ಹೆಸರೇ ಸೂಚಿಸುವಂತೆ ಶೇರ್ ಗಳ ಪ್ರಮಾಣ ಪತ್ರದಲ್ಲಿನ ಇಟ್ಟು ಕೊಳ್ಳಲಿರುವ ಸಮಯ ಮುಗಿದ ಮೇಲೆ ಅದನ್ನು ಹಿಂದೆ ನೀಡಿ ಅದರ ಮೌಲ್ಯ ಮರು ಪಾವತಿಗೆ ಅರ್ಹವಾಗಿರುತ್ತದೆ. ಶೇರ್ ನ್ನು ಹಿಂದೆ ಕೊಡುವಾಗ (ಬಿಡಿಸಿ ಕೊಳ್ಳುವಾಗ) ಹೆಚ್ಚುವರಿ ಹಣವನ್ನೂ ಕೂಡ ನೀಡಬಹುದು. ಬಿಡಿಸಿ ಕೊಳ್ಳಲಾಗದ ಶೇರ್ ಗಳನ್ನೂ ಹಿಂದೆ ನೀಡಲು ಆಗದು, ಕೇವಲ ಕಂಪನಿಯು ಮುಚ್ಚುವಾಗ ಮಾತ್ರ ಬಿಡಿಸಿ ಕೊಳ್ಳಬಹುದು. ಬಿಡಿಸಿ ಕೊಳ್ಳಬಹುದಾದ ಪ್ರಾಶಸ್ತ್ಯದ ಶೇರ್ ಹೊಂದಿರುವ ಶೇರ್ ದಾರನು ಬಿಡಿಸಿ ಕೊಳ್ಳುವ ಸಮಯದಲ್ಲಿ ಶೇರ್ ನ ಮುಖ ಬೆಲೆಯ ಮೌಲ್ಯ, ಹೆಚ್ಚುವರಿ ಹಣ ಮತ್ತು ಬಾಕಿ ಉಳಿದ ಡಿವಿಡೆಂಡ್ ಜೊತೆಗೆ ಚಾಲಿತ ವರ್ಷದ ಪ್ರಮಾಣಕ್ಕೆ ಅನುಸಾರವಾದ ಡಿವಿಡೆಂಡ್ ಗಳನ್ನೆಲ್ಲ ಪಡೆಯುವನು.

೧೯೮೮ ರ ನಂತರದ ಕಾನೂನಿನಂತೆ, ಬಿಡಿಸಿ ಕೊಳ್ಳಬಹುದಾದ ಅಥವಾ ಬಿಡಿಸಿ ಕೊಳ್ಳಲಾಗದ ಪ್ರಾಶಸ್ತ್ಯದ ಶೇರ್ ಗಳನ್ನೂ ಶೇರ್ ಗಳನ್ನು ಬಿಡುಗಡೆ ಮಾಡಿದ ದಿನದಿಂದ ೮ ವರ್ಷಗಳ ನಂತರ ಬಿಡುಗಡೆ ಮಾಡುವಂತಿಲ್ಲ. ಇದರ ಜೊತೆಗೆ ಕಂಪನಿಯು

ಬಿಡಿಸಿ ಕೊಳ್ಳಬಹುದಾದ ಪ್ರಾಶಸ್ತ್ಯದ ಶೇರ್ ಗಳನ್ನು ನೀಡುವುದರಿಂದ ಕಂಪನಿಗೆ, ಕಂಪನಿಯಲ್ಲಿ ಹಣವು ಹೆಚ್ಚಾದಾಗ ಹಣ ಪಾವತಿ ಮಾಡಿ ಇಲ್ಲವೇ ಕಡಿಮೆ ಬಡ್ಡಿಯ ಸಾಲದ ಮೂಲಕ ಬಿಡಿಸಿ ಕೊಳ್ಳುವ ಮೂಲಕ ಉಪಯೋಗಕಾರಿಯಾಗಿದೆ.

ಬದಲಾಯಿಸಬಹುದಾದ ಮತ್ತು ಬದಲಾಯಿಸಲಾಗದ ಶೇರ್ ಗಳು:

ಬದಲಾಯಿಸಲಾಗುವ ಪ್ರಾಶಸ್ತ್ಯದ ಶೇರ್ ಗಳೆಂದರೆ ಈ ಶೇರ್ ಗಳನ್ನು ಇಕ್ವಿಟಿ ಯಾಗಿ ಒಂದು ಪೂರ್ವ ನಿರ್ಧಾರಿತ ಅನುಪಾತದ ಆಧಾರದಲ್ಲಿ ಪರಿವರ್ತಿಸಬಹುದು. ಬದಲಾಯಿಸಲಾಗದ ಶೇರ್ ಗಳು ಪ್ರಾಶಸ್ತ್ಯದ ಶೇರ್ ಗಳಾಗಿಯೇ ಇರುವುದು.


No comments:

Post a Comment