Wednesday, August 17, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೨೫

ಈ ಹಿಂದಿನ ಅಂಕಣದಲ್ಲಿ ನಾವು ಬೇರೆ ಬೇರೆ ರೀತಿಯ ರೆಸೆರ್ವ್ ಗಳ ಬಗ್ಗೆ ನೋಡಿದೆವು. ಇವತ್ತಿನ ಅಂಕಣದಲ್ಲಿ ನಾವು ಶೇರ್ ಪ್ರೀಮಿಯಂ (ರಕ್ಷಣಾ ಪ್ರೀಮಿಯಂ) ಬಗ್ಗೆ ತಿಳಿಯೋಣ.

ಶೇರ್ ಪ್ರೀಮಿಯಂ ಎಂಬ ಅಕೌಂಟ್ ನ್ನು ಕಂಪನಿಯ ಶೇರ್ ನ ಮುಖ ಬೆಲೆ ಮತ್ತು ಕಂಪನಿಗೆ ನಿಜವಾಗಿ ಶೇರ್ ನ ಹೊಸ ಬಿಡುಗಡೆಯಿಂದ ಲಭಿಸುವ ಮೌಲ್ಯದ ನಡುವಿನ ವ್ಯತ್ಯಾಸವನ್ನು ಸಮದೂಗಿಸಲು ಇರುವುದು.

ಒಂದು ಉದಾಹರಣೆಯಿಂದ ಇದು ಅರಿವಾಗುವುದು. ಒಂದು ಕಂಪನಿಯು ೧೦/- ಮುಖ ಬೆಲೆಯ ಶೇರ್ ನ್ನು ಬಿಡುಗಡೆ ಮಾಡಿತೆಂದು ಅಂದುಕೊಳ್ಳೋಣ, ಬದಲಾಗಿ ಕಂಪನಿಯು ೧೫/- ಪ್ರತಿ ಶೇರ್ ಪಡೆಯಿತು ಎಂದು ಅಂದುಕೊಳ್ಳೋಣ. ಆಗ ಕಂಪನಿಯು ೧೫,೦೦೦/- ಇಕ್ವಿಟಿ ಕ್ಯಾಪಿಟಲ್ ಆಗಿ ಪಡೆಯುತ್ತದೆ ಮತ್ತು ಇದರ ೧೦,೦೦೦/- ಶೇರ್ ಕ್ಯಾಪಿಟಲ್ ಆಗುತ್ತದೆ. ಉಳಿದ ಹೆಚ್ಚಿನ ಕ್ಯಾಪಿಟಲ್ ನಿಜವಾಗಲು ಶೇರ್ ಕ್ಯಾಪಿಟಲ್ ಗೆ ಸಮನಾದ ಕಂಪನಿಯ ಮಾಲೀಕತ್ವಕ್ಕೆ ಮರು ಪಾವತಿಯದದ್ದು. ಇದನ್ನು ಬ್ಯಾಲೆನ್ಸ್ ಶೀಟ್ ನಲ್ಲಿ ಶೇರ್ ಪ್ರೀಮಿಯಂ ಅಕೌಂಟ್ ನಲ್ಲಿ ತೋರಿಸುವರು.

ಇದು ಶೇರ್ ಕ್ಯಾಪಿಟಲ್ ಗಿಂತ ಅಧಿಕವಾಗಿ ಲಭಿಸಿದ್ದರಿಂದ ಇದನ್ನು ಶೇರ್ ದಾರರಿಗೆ ಹಿಂದುರಿಗಿಸಲಾರದು. ಅದನ್ನು ಕೆಳಗಿನ ಉದ್ದೇಶಗಳಿಗೆ ಉಪಯೋಗಿಸಬಹುದು.
೧. ಪೂರ್ತಿಯಾಗಿ ಪಾವತಿಯಾದ ಬೋನಸ್ ಶೇರ್ ಬಿಡುಗಡೆ ಮಾಡಲು.
೨. ಕಂಪನಿಯ ಆರಂಭಿಕ ವೆಚ್ಚಗಳನ್ನು ಸಮದೂಗಿಸಿ ತೆಗೆಯಲು.
೩. ಶೇರ್ ಬಿಡುಗಡೆ ಮಾಡಲು ಅಥವಾ ಕಂಪನಿಯ debentures ಗಳಿಗೆ ನೀಡುವ ಕಮೀಶನ್ ಅಥವಾ ಡಿಸ್ಕೌಂಟ್ ಗಳ ವೆಚ್ಚವನ್ನು ಸಮದೂಗಿಸಿ ತೆಗೆಯಲು.
೪. ಬಿಡುಗಡೆ ಗೊಳಿಸಬಹುದಾದ ಶೇರ್ ಕಂಪನಿಯ debentures ಗಳಿಗೆ ನೀಡುವ ಹೆಚ್ಚುವರಿ ಹಣ ನೀಡಲು

No comments:

Post a Comment