Sunday, September 4, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೨೮

ಹಿಂದಿನ ಅಂಕಣದಲ್ಲಿ ನಾವು Investment Allowance Reserve ಬಗ್ಗೆ ಅರಿತೆವು. ಇಂದಿನ ಅಂಕಣದಲ್ಲಿ ನಾವು Appropriation ಬಗ್ಗೆ ಅರಿಯೋಣ.

Appropriation ಸಾಮಾನ್ಯ ಅರ್ಥದಲ್ಲಿ ಹಣವನ್ನು ಒಂದು ಉದ್ದೇಶಕ್ಕೊಸ್ಕರ ಮೀಸಲಾಗಿ ತೆಗೆದಿಡುವುದು. ಕಂಪನಿಯು ಯಾವ ರೀತಿಯಲ್ಲಿ ಹಣವನ್ನು ಪಾಲು ಮಾಡಿಕೊಂಡಿದೆಯೋ ಅದು ಒಬ್ಬ ಹೂಡಿಕೆ ದಾರನಿಗೆ ಕಂಪನಿಯು ಹೇಗೆ ತನ್ನ ಹಣದ ವಿನಿಯೋಗವನ್ನು ನಿರ್ವಹಿಸುತ್ತಿದೆ ಎಂಬುದನ್ನು ಹೇಳುತ್ತದೆ.

ಇದನ್ನೇ ಅಕೌಂಟ್ ನ ಭಾಷೆಯಲ್ಲಿ ಸಾಮಾನ್ಯ ಅಭ್ಯಾಸವಾದ, ಕಂಪನಿಯ ಲಾಭ & ನಷ್ಟದ ಖಾತೆಯ ಹಣವನ್ನು ವಿವಿಧ ರಿಸರ್ವ್ (generall reserve, contingency reserve etc.) ಗಳಿಗೆ ಹಂಚುವುದು. ಆದರೆ ಕಂಪನಿಯ ಡಿವಿಡೆಂಡ್ ಕೊಡುವುದು ಇದರಿಂದ ಬದಲಾಗದು. ಕಾರಣ, ಕಂಪನಿಯು ಡಿವಿಡೆಂಡ್ ನ್ನು ಇಂದಿನ ಅಥವಾ ಹಿಂದಿನ ಯಾವುದೇ ಲಾಭದಿಂದ ಖಾತೆಯ ಹೆಸರನ್ನು ಗಣನೆಗೆ ತೆಗೆದುಕೊಳ್ಳದೆ ಕೊಡಬಹುದು.

ಕೆಲವು ದೇಶಗಳಲ್ಲಿ ಕೆಲವು ಪ್ರಕಾರದ ರಿಸರ್ವ್ ಗಳಿಗೆ ವರ್ಗಾಯಿಸುವುದನ್ನು ಕಡ್ಡಾಯಗೊಳಿಸಿರುವರು. ಈ ರಿಸರ್ವ್ ಗಳನ್ನೂ ಹಂಚಲು ಸಾಧ್ಯವಿಲ್ಲ

ಆಂಗ್ಲ ಅಂಕಣ:
http://somanagement.blogspot.com/2011/08/finance-and-management-28.html

No comments:

Post a Comment