Thursday, April 14, 2011

ವ್ಯವಹಾರ ಪ್ರತಿಕೃತಿ - ಅಂತರಜಾಲ ನಿವೇಶನ (website) ಹೊಂದಿದ ಸಂಸ್ಥೆಗಳು

ಹಿಂದಿನ ಅಂಕಣದಲ್ಲಿ , ನಿಷ್ಠವೃದ್ಧಿ ವ್ಯವಹಾರ ಪ್ರತಿಕೃತಿಯ ಬಗ್ಗೆ ತಿಳಿದು ಕೊಂಡೆವು, ಇಂದಿನ ಅಂಕಣ ದಲ್ಲಿ, ನಮ್ಮ ಸುತ್ತಲಿನ ಅಂಗಡಿ ಅಥವಾ ಸಂಸ್ಥೆಯು ಅಂತರಜಾಲತಂತ್ರಜ್ಞಾನದ ಲಾಭವನ್ನು ಪಡೆದು ಹೇಗೆ ಉನ್ನತಿಯನ್ನು ಪಡೆದು ಅದನ್ನೆ ಒಂದು ವ್ಯವಹಾರ ಪ್ರತಿಕೃತಿಯನ್ನಾಗಿ ಮಾಡಿದೆ ಎಂದು ತಿಳಿದು ಕೊಳ್ಳೋಣ.

ಈಗಾಗಲೇ ನಾವೆಲ್ಲ "ವಾಲ್ - ಮಾರ್ಟ್ " ಎನ್ನುವ ಸಂಸ್ಥೆ ಬಗ್ಗೆ ಕೇಳಿರುತ್ತವೆ, ಅಮೇರಿಕಾದಲ್ಲಿ ಅಂಗಡಿಗಳ ಮೂಲಕ ವ್ಯವಹಾರದಲ್ಲಿ ಇದು ಅತ್ಯಂತ ದೊಡ್ಡ ಸಂಸ್ಥೆಯಾಗಿ ರೂಪಗೊಂಡಿದೆ, ಇದರದ್ದೇ ಇನ್ನೊಂದು ವ್ಯವಹಾರ ಪ್ರತಿಕೃತಿಯೂ ಇದೆ ಇನ್ನೊಮ್ಮೆ ಅದರಬಗ್ಗೆ ತಿಳಿದುಕೊಳ್ಳೋಣ, ಇಂದಿನ ಅಂಕಣದಲ್ಲಿ ಇದರ ವಿಸ್ತಾರದ ಲಾಭವನ್ನು ಅಂತರಜಾಲದ ಮೂಲಕವೂ ತನ್ನ ಗ್ರಾಹಕರಿಗೆ ಪಸರಿಸಲು, ಅದರ "ವೆಬ್ -ಸೈಟ್"ಅನ್ನು ಇರ್ಮ್ಮಿಸಿದೆ.

ವಾಲ್ - ಮಾರ್ಟ್ ಗ್ರಾಹಕರು ತಮ್ಮ ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ವಸ್ತುವನ್ನು ಖರಿದಿಸ ಬಹುದು ಅಥವಾ ನೇರವಾಗಿ ಅಂಗಡಿಗೆ ಹೋಗಿ ಖರಿದಿಸ ಬಹುದು. ಇದರಿಂದಾಗಿ ಯಾರಿಗೆ ಅಂಗಡಿಗೆ ಹೋಗಲು ಬಿಡುವಿಲ್ಲವೋ ಅವರು ಮನೆಯಲ್ಲಿಯೂ ಅಥವಾ ತಮ್ಮ ಕಛೇರಿಯಲ್ಲೋ ಕುಳಿತು ತಮ್ಮ ಬೇಡಿಕೆಯನ್ನು ತಿಳಿಸಿದಲ್ಲಿ ಅವರ ಮನೆಗೆ ಅದನ್ನು ತಲುಪಿಸುತ್ತಾರೆ. ಇದನ್ನೇ "ಬ್ರಿಕ್ ಅಂಡ್ ಕ್ಲಿಕ್" ಎಂದು ಕರೆಯುತ್ತಾರೆ.

ಅಂತರ್ಜಾಲವು ಹಿಂದಿದ್ದ ಭೌಗೊಳಿಕ ಪರಿಮಿತಿಗಳನ್ನೂ ದೂರಮಾಡಿ ಇಂದು, ವ್ಯವಹಾರಗಳಿಗೆ ಇಡೀ ವಿಶ್ವವನ್ನೇ ತನ್ನ ಕಾರ್ಯ ಕ್ಷೇತ್ರವನ್ನಾಗಿ ಮಾಡುವ ಸೌಕರ್ಯವನ್ನು ನೀಡಿದೆ. ಇಂದು ಯಾವುದೇ ಹೊಸ ವ್ಯವಹಾರವೇ ಆಗಲಿ ತನ್ನ ಪರ್ಯಾಯವನ್ನು ತಿಳಿಸುವಾಗ ಅದರ "ವೆಬ್ -ಸೈಟ್" ನ ಬಗ್ಗೆ ಹೇಳುವುದು ಇದಕ್ಕೆ ಸಾಕ್ಷಿಯೇ ಸರಿ.

ಆಂಗ್ಲ ಅಂಕಣ: http://somanagement.blogspot.com/2011/04/business-model-click-and-brick.html

No comments:

Post a Comment