Wednesday, May 4, 2011

ವ್ಯವಹಾರ ಪ್ರತಿಕೃತಿ - ಪ್ರತ್ಯೇಕತೆ

ನಿಮ್ಮ ಸುತ್ತಮುತ್ತಲಿರುವ ವಿವಿಧ ಅಂಗಡಿಗಳನ್ನು ಗಮನಿಸಿದಾಗ ನೀವು ಅರಿಯುವುದೇನೆಂದರೆ ಹೆಚ್ಚಿನವುಗಳು ವಿವಿಧ ಬ್ರ್ಯಾಂಡ್ ನ ವಸ್ತುಗಳನ್ನು ತಮ್ಮ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವರು. ಇದರಿಂದಾಗಿ ಎಲ್ಲಾ ಬಗೆಯ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಅವುಗಳು ಯಶಸ್ವಿಯಾಗುವುವು, ಆ ಮೂಲಕ ನಿಮ್ಮ ಉತ್ಪನ್ನಗಳು ಹೊರಗೆ ಕಾಣುವಂತೆ ಮಾಡುವುವು. ಆದರೆ ಪ್ರಸಿದ್ಧವಾದ ಬ್ರ್ಯಾಂಡ್ ಗಳು ಪ್ರತ್ಯೇಕವಾಗಿ ಹೊರನಿಂತು ತಮ್ಮದೆಯಾದ ಅಂಗಡಿ ಮಳಿಗೆಗಳನ್ನು ಹೊಂದಿರುತ್ತವೆ. ಇಂದಿನ ಈ ಬ್ಲಾಗ್ ಇದರ ಕುರಿತಾಗಿದೆ.

ಬ್ರ್ಯಾಂಡ್ ಎನ್ನುವುದು ಒಂದು ಕಂಪನಿಯು ನಮ್ಮಲ್ಲಿ ಸದಾಕಾಲ ಮೂಡಿಸಲೆತ್ನಿಸುವ ಒಂದು ಅನುಭವ. ದೊಡ್ಡ ಬ್ರ್ಯಾಂಡ್ ಗಳು ತಮ್ಮದೇಯಾದ ಅನುಯಾಯಿಗಳನ್ನು ಹೊಂದಲು ಇಚ್ಛಿಸುತ್ತವೆ. ಪ್ರತ್ಯೇಕತೆ ಇದನ್ನು ಸಾಧಿಸಲಿರುವ ಮಾರ್ಗಗಳಲ್ಲಿ ಒಂದು. ಸಂಪೂರ್ಣ ಪ್ರತ್ಯೇಕವಾಗಿ ಒಂದು ಬ್ರ್ಯಾಂಡ್ ನ ಮಾರಟಕ್ಕೆ ಇರುವ ಮಳಿಗೆಗಳು ಸಾಮಾನ್ಯವಾಗಿ ತಮ್ಮದೇಯಾದ ಸಿದ್ಧಾಂತ ಮತ್ತು ಭಾವವನ್ನು ತಿಳಿಸಲು ರೂಪಿಸಲಾಗಿರುತ್ತವೆ. ಅಲ್ಲಿನ ಕರ್ಮಚಾರಿಗಳು ಬ್ರ್ಯಾಂಡ್ ನ ಉದ್ದೇಶವನ್ನು ವಿಷದಿಸಲೇ ಸೂಕ್ತವಾಗಿ ತರಬೇತಿಯನ್ನು ಪಡೆದಿರುತ್ತಾರೆ. ಈ ರೀತಿಯ ಅನುಭವ ಪಡೆಯುವ ಗ್ರಾಹಕ ಸ್ವಾಭಾವಿಕವಾಗಿ ಬ್ರ್ಯಾಂಡ್ ನ ಒಟ್ಟಿಗೆ ಒಂದು ಪ್ರಾಮಾಣಿಕ ಸಂಬಂಧಕ್ಕೆ ಅಂಟಿಕೊಳ್ಳುವರು. ಆ ಮೂಲಕ ಯಾವ ಬೆಲೆಯನ್ನಾದರೂ ತೆರುವಷ್ಟು ನಂಬಿಕೆಯನ್ನು ಹೊಂದಿರುವರು. ಈ ಮೂಲಕ ಬ್ರ್ಯಾಂಡ್ ನ ಅನುಯಾಯಿಗಳಲ್ಲಿ ಒಬ್ಬನಾಗುವನು. ಇಂದಿನ ಯುಗದಲ್ಲಿನ "ಆಪಲ್ ಇಂಕ್" ನ ಅನುಯಾಯಿಗಳು ಈ ಮಾದರಿಗೆ ಒಂದು ಉತ್ತಮ ಉದಾಹರಣೆ.

ಈ ರೀತಿಯ ಪ್ರತ್ಯೇಕತೆಯು ಕಂಪನಿಗಳಿಗೆ ತಮ್ಮ ಗುತ್ತಿಗೆದಾರ ಮಳಿಗೆಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಲು ಸಾಧ್ಯವಾಗುವುದು. ಇವಲ್ಲದೆ ಕಂಪನಿಗಳಿಗೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲು ಮತ್ತು ಆ ಮೂಲಕ ಆಗಬಹುದಾದ ಸ್ವ- ಭಕ್ಷಣ ದಂತಹ ದುರಂತಗಳನ್ನು ತಪ್ಪಿಸಲೂ ಕೂಡ ಸಾಧ್ಯವಾಗುವುದು. ಇದರಿಂದ ಬ್ರ್ಯಾಂಡ್ ನ ವರ್ಚಸ್ಸು ನೀರಸವಾಗುವುದಂತೂ ಖಂಡಿತವಾಗಿಯೂ ತಪ್ಪಿಸಲ್ಪಡುತ್ತದೆ.

ಸೂಕ್ಷ್ಮವಾಗಿ ಗಮನಿಸಿದರೆ ಈ ಮಾದರಿಯು ಕಂಪನಿಗಳಿಗೆ ಕೃತಕ ಅಭಾವವನ್ನು ಸೃಷ್ಟಿಸಿ ಮಾರುಕಟ್ಟೆಯಲ್ಲಿ ತಮ್ಮದೇ ಬೆಲೆಯನ್ನು ನಿಗದಿ ಪಡಿಸಲೂ ಕೂಡ ಸಹಕಾರಿ.

ಆಂಗ್ಲ ಅಂಕಣ:
http://somanagement.blogspot.com/2011/05/business-model-exclusivity.html

No comments:

Post a Comment