Thursday, May 5, 2011

ವ್ಯವಹಾರ ಪ್ರತಿಕೃತಿ - ಚಂದಾದಾರಿಕೆ

ಈ ಮಾದರಿಯು ಪತ್ರಿಕೆಗಳ ಮತ್ತು ಪ್ರಕಾಶನಗಳ ಉದ್ಯಮದಲ್ಲಿ ಬಹಳ ಚಾಲ್ತಿಯಲ್ಲಿರುವಂತದು. ಇದನ್ನೇ ಕೊಂಚ ಬದಲಾಯಿಸಿಕೊಂಡು ಇತರ ಉದ್ಯಮಗಳಲ್ಲೂ ಅಳವಡಿಸಬಹುದು.

ನಾವು ಸಾಮಾನ್ಯವಾಗಿ ವಿವಿಧ ರೀತಿಯ ಪತ್ರಿಕೆಗಳಿಗೆ ಚಂದಾದಾರರಾಗಿರುತ್ತೇವೆ. ಚಂದಾದಾರಿಕೆ ಎಂದರೆ ಏನು?

ಇದರರ್ಥ ನಾನು ಪತ್ರಿಕೆಯಲ್ಲಿ ಬರುವುದನ್ನು ತುಂಬಾ ಇಷ್ಟಪಟ್ಟಿದ್ದು, ಅದನ್ನು ಕೊಂಡುಕೊಳ್ಳಲು ಮುಂಗಡ ಹಣಕೊಡಲು (ಮಾಸಿಕ/ವಾರ್ಷಿಕ) ನಾನು ಹಿಂಜರಿಯುವುದಿಲ್ಲವೆಂದು. ಜೊತೆಗೆ ಪತ್ರಿಕೆಯವರಿಗೆ ತಮ್ಮ ಪತ್ರಿಕೆಯು ಕೇವಲ ಚಂದಾದಾರನಿಂದಷ್ಟೇ ಅಲ್ಲದೆ ಅವರ ಕುಟುಂಬ, ಸ್ನೇಹಿತರಿಂದ ಕೂಡ ಓದಲ್ಪಡುವುದೆಂಬ ಖಾತ್ರಿ ಇರುತ್ತದೆ. ಈ ಚಂದಾದಾರಿಕೆ ಮಾದರಿಯು ಎರಡು ಅಂಶಗಳನ್ನು ಒಳಗೊಂಡಿದೆ - ಪ್ರಾಮಾಣಿಕತೆ ಮತ್ತು ಪ್ರೋತ್ಸಾಹ.

ಈ ಮಾದರಿಯಲ್ಲಿ ಮುಖ್ಯವಾಗಿ ಗಮನಿಸ ಬೇಕಾದ ಅಂಶ ಓದುಗರಿಗೆ ಸಮರ್ಪಕವಾದ ವಿಚಾರಗಳನ್ನು ಪತ್ರಿಕೆಗಳಲ್ಲಿ ಇರುವಂತೆ ಮಾಡುವುದು. ಹಾಗಿಲ್ಲದಿದ್ದಲ್ಲಿ ಓದುಗರು ಚಂದಾದಾರಿಕೆಯನ್ನು ರದ್ದು ಮಾಡುವರು. ಈ ರೀತಿಯ ಉದ್ಯಮಗಳ ಆರ್ಥಿಕತೆ ಅವುಗಳು ಪತ್ರಿಕೆಗಳಿಗೆ ನಿಗದಿ ಪಡಿಸುವ ಬೆಲೆಗಳಿಂದ ವಿವರಿಸಬಹುದು, ಇನ್ನು ಕೆಲವು ಉದ್ಯಮಗಳು ಜಾಹೀರಾತುಗಳ ಮೂಲಕ ಸಂಪಾದನೆ ಮಾಡುವರು.

ಈ ಮಾದರಿಯು ಉದ್ಯಮಗಳಿಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡಲೂ ಕೂಡ ಬಳಸಲಾಗುತ್ತಿದೆ. ಒಟ್ಟಾಗಿ ಈ ವ್ಯವಹಾರ ಪ್ರತಿಕೃತಿಯು ಉತ್ತಮ ಗುಣಮಟ್ಟದ ವಿಷಯಗಳನ್ನು ಗ್ರಾಹಕರು ತೆಗೆದುಕೊಳ್ಳುವುದರಲ್ಲಿ ನಿಂತಿದೆ.

ಆಂಗ್ಲ ಅಂಕಣ:
http://somanagement.blogspot.com/2011/05/business-model-subscription.html

No comments:

Post a Comment