Tuesday, May 17, 2011

ಕಾರ್ಯ ತಂತ್ರ ೨

ಈ ಹಿಂದೆ ಅಂಕಣದಲ್ಲಿ ಕಾರ್ಯ ತಂತ್ರದ ಬಾಗೆ ಪ್ರಸ್ತಾಪಿಸುವಾಗ ಬಾಹ್ಯ ಮೂಲದ ವ್ಯವಹಾರದ ಸವಾಲುಗಳನ್ನು ಹೇಳಿದೆವು. ಇಂದಿನ ಅಂಕಣದಲ್ಲಿ ನಾವು ಕಾರ್ಯ ತಂತ್ರದ ವ್ಯಾಖ್ಯಾನವನ್ನು ಮಾಡೋಣ.

ವ್ಯವಹಾರ ಕಾರ್ಯ ತಂತ್ರ ಸೂಕ್ಷ್ಮವಾಗಿ "ಯಶಸ್ವಿಯಾಗಿ ಸ್ಪರ್ಧಿಸುವುದು" ಎಂದು ವ್ಯಾಖ್ಯಾನಿಸಬಹುದು. ಕಾರ್ಯ ತಂತ್ರದ ಮೂಲವು ಹಿಂದಿನ ಕಾಲದಲ್ಲಿ ಯುದ್ಧಗಳಿಂದ ಆರಂಭವಾದರೂ ಅದರ ಉಪಯೋಗ ವ್ಯವಹಾರ ಜಗತ್ತಿಗೂ ವಿಸ್ತರಿಸಬಹುದು.

ಪ್ರಾರಂಭಿಕ ಹಂತದ ಕಂಪನಿಗಳು ದೊಡ್ಡ ಕಂಪನಿಗಳಿಂದ ಉಂಟಾಗುವ ದೊಡ್ಡ ಗಾತ್ರದ ಸವಾಲುಗಳನ್ನು ಎದುರಿಸಿ ನಿಲ್ಲಬೇಕು. ಅದೇ ರೀತಿ ದೊಡ್ಡ ಕಂಪನಿಗಳು ತಮ್ಮ ವ್ಯವಹಾರ ಪ್ರದೇಶವನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಶ್ರಮ ಪಡುತ್ತಿರಬೇಕು.

ಪ್ರತಿಯೊಂದು ಯಶಸ್ವಿ ವ್ಯವಹಾರವು ಒಂದೊಂದು ಕಾರ್ಯ ತಂತ್ರದ ಪಾಠಗಳೇ ಆಗಿವೆ. ಇನ್ನು ಮುಂದಿನ ಅಂಕಣಗಳಲ್ಲಿ ಉತ್ತಮ ರೀತಿಯ ಮಾದರಿಗಳನ್ನು ನಿಮ್ಮ ಮುಂದೆ ಇಟ್ಟು ಒಂದು ಪ್ರಭಾವಶಾಲಿ ಉತ್ತಮ ಬ್ಲಾಗ್ ನಿಮ್ಮ ಮುಂದೆ ಇದುವ ಪ್ರಯತ್ನ ಮಾಡುವೆವು.

No comments:

Post a Comment