Monday, May 9, 2011

ವ್ಯವಹಾರ ಪ್ರತಿಕೃತಿ - ಜಾಹಿರಾತು ಮತ್ತು ಪ್ರಚಾರ

ಹಿಂದೆ ತಿಳಿಸಿದಂತೆ ವ್ಯವಹಾರ ಪ್ರತಿಕೃತಿ ಎನ್ನುವುದು ಕೇವಲ ಒಂದು ಉದ್ಯಮವು ಹೇಗೆ ಹಣ ಸಂಪಾದನೆ ಮಾಡುವುದೆನ್ನುವುದಾಗಿದೆ. ಜಾಹೀರಾತು ಮತ್ತು ಪ್ರಚಾರಗಳು ಮಾರ್ಕೆಟಿಂಗ್ ನ ಒಂದು ಭಾಗವಾಗಿದ್ದರೂ ಅದನ್ನೇ ಒಂದು ವ್ಯವಹಾರ ಪ್ರತಿಕೃತಿಯಾಗಿ ಪ್ರತ್ಯೇಕಿಸುವುದೂ ಕೂಡ ಸರಿಯೇ ಆಗಿದೆ.ಒಂದು ಜಾಹಿರಾತಿಗೆ ಜಾಗದ ಅವಶ್ಯಕತೆ ಇದೆ, ಅದು ಭೌತಿಕವಾಗಿರಬಹುದು, ಅಂತರ್ಜಾಲದಲ್ಲಿನ ತಾತ್ವಿಕ ತಾಣಗಳಾಗಿರಬಹುದು. ಈ ರೀತಿಯ ಜಾಹಿರಾತಿಗೆ ಮೀಸಲಾದ ತಾಣಗಳನ್ನು ಹೊಂದಿರುವ ವ್ಯವಹಾರಗಳು ಪ್ರತ್ಯೇಕವಾಗಿ ಕೆಲವೊಂದು ವೀಕ್ಷಕರಿಗೆ ಮಾತ್ರ ನೀಡುವ ತಾಣಗಳನ್ನು ದುಬಾರಿ ಬೆಲೆಯಲ್ಲಿಯೂ ವ್ಯವಹಾರ ನಡೆಸುವರು.

ಇಂದು ಹಲವಾರು ಕಂಪನಿಗಳು ಈ ರೀತಿಯ ಜಾಹಿರಾತಿನ ತಾಣಗಳನ್ನು ನೀಡುವುದರ ಮೂಲಕ ತಮ್ಮ ವ್ಯವಹಾರವನ್ನು ನಡೆಸುತ್ತಿವೆ. ಅಂತರ್ಜಾಲದ ಪ್ರಸಿದ್ಧ ಗೂಗಲ್ ಕಂಪನಿಯು ಈ ವ್ಯವಹಾರದಲ್ಲಿ ಎಲ್ಲವುಗಳಿಗಿಂತ ಮೇಲೆ ನಿಂತಿದೆ. ಗೂಗಲ್ ತನ್ನ ಹೆಚ್ಚಿನ ಎಲ್ಲ ಉತ್ಪನ್ನಗಳನ್ನು ಉಚಿತವಾಗಿ ನೀಡುವುದರ ಹಿಂದಿನ ಉದ್ದೇಶ, ಆ ಉತ್ಪನ್ನಗಳಲ್ಲಿ ಜಾಹಿರಾತುಗಳನ್ನು ಪ್ರದರ್ಶಿಸುವುದು ಮತ್ತು ಉತ್ಪನ್ನಗಳನ್ನು ಉಪಯೋಗಿಸುವ ಜನರ ಅಂಕಿ ಅಂಶಗಳನ್ನು ಅರಿಯುವುದು. ಇವುಗಳು ಗೂಗಲ್ ಗೆ ಅತಿ ಹೆಚ್ಚಿನ ಆದಾಯವನ್ನು ಗಳಿಸಿಕೊಡುತ್ತವೆ. ಇತರ ಸಾಮಾಜಿಕ ತಾಣಗಳೂ ಕೂಡ ಈ ರೀತಿಯ ಮಾದರಿಯನ್ನೇ ನೆಚ್ಚಿಕೊಂಡು ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಈ ಜಾಹಿರಾತಿನ ಮೂಲಕ ಪ್ರಚಾರದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಇವು ತುಂಬಾ ಹಿಂದಿನಿಂದಲೂ ನಡೆದು ಬಂದಿದೆ ಆದ್ದರಿಂದ ಇವುಗಳದ್ದೇ ಆದ ಇತಿಹಾಸ ಇವುಗಳಿಗೆ ಆಧಾರವಾಗಿದೆ.

ಆಂಗ್ಲ ಅಂಕಣ:

No comments:

Post a Comment