ಈ ಹಿಂದಿನ ಅಂಕಣದಲ್ಲಿ ನಾವು ವ್ಯವಹಾರ ಸಂಸ್ಥೆಯ ವಿವಿಧ ಆಯಾಮಗಳ ಬಗ್ಗೆ ಚರ್ಚಿಸುವೆವು ಎಂದು ಹೇಳಿದ್ದೆವು. ಇಂದಿನ ಅಂಕಣದಲ್ಲಿ ನಾವು ಕೆಲವೊಂದು ವಿಚಾರಗಳ (variables) ಬಗ್ಗೆ ಅರಿಯುವ ಮೂಲಕ ಆಯಾಮಗಳನ್ನು ಅರಿಯಲು ಮುಂದುವರಿಯೋಣ.
ಈ variables ಗಳನ್ನು ಅನೇಕ ವಿಧಗಳಲ್ಲಿ ವಿವಿಧ ವ್ಯಾಖ್ಯಾನಕಾರರು ವ್ಯಾಖ್ಯಾನ ಮಾಡಿರುವರು.ನಾವು ಸಾಮಾನ್ಯವಾಗಿ ಬಳಕೆಯಲ್ಲಿರುವ ವ್ಯಾಖ್ಯಾನವನ್ನುಬಳಸೋಣ.
Administrative Component: ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಲೈನ್ ಸೂಪರ್ ವೈಸರ್, ಮ್ಯಾನೇಜರ್, ಸ್ಟಾಫ್ ವ್ಯಕ್ತಿಗಳು ಇರುವ ಸಂಖ್ಯೆ.
Autonomy: ಕೆಲವೊಂದು ಬಹಳ ಪ್ರಾಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಂಪನಿಯ ಉನ್ನತ ಮ್ಯಾನೇಜ್ಮೆಂಟ್ ತಲುಪಬೇಕಾದ ಅಧಿಕಾರಿ/ಗಳು.
Centralization: ನಿರ್ಧಾರ ತೆಗೆದುಕೊಳ್ಳುವ ಪಾಲ್ಗೊಳ್ಳುವ ವ್ಯಕ್ತಿಗಳ ಕೆಲಸಗಳ ಒಂದು ಭಾಗ ಮತ್ತು ಪಾಲ್ಗೊಳ್ಳುವ ಕ್ಷೇತ್ರಗಳ ಸಂಖ್ಯೆ, ಅಥವಾ ಅಧಿಕಾರ ವ್ಯವಸ್ಥೆಯ ಏಕತ್ರತೆ, ಅಥವಾ ಪ್ರಮುಖ ಮತ್ತು ವಿಶೇಷವಾದ ರೀತಿ ನಿಯಮಾವಳಿಗಳನ್ನು ರೂಪಿಸಲು ನಿರ್ಧಾರ ತೆಗೆದು ಕೊಳ್ಳುವ ಕೇಂದ್ರ ಬಿಂದು, ಅಧಿಕಾರದ ವಿವಿಧ ಸ್ತರಗಳಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮಟ್ಟ, ಮತ್ತು ದೀರ್ಘ ಕಾಲಿನ ಯೋಜನೆಗಳನ್ನು ರೂಪಿಸುವಲ್ಲಿ ಪಾಲ್ಗೊಳ್ಳುವ ಮಟ್ಟ.
Complexity: ಉದ್ಯೋಗಿಗಳ ವಿಶೇಷತೆಗಳ, ಔದ್ಯೋಗಿಕ ಚಟುವಟಿಕೆಗಳ ಮತ್ತು ಔದ್ಯೋಗಿಕ ತರಬೇತಿಗಳ ಸಂಖ್ಯೆ.
Delegation of authority: ನಿರ್ಧಿಷ್ಟವಾದ ಮ್ಯಾನೇಜ್ಮೆಂಟ್ ನಿರ್ಧಾರಗಳನ್ನು ಚೀಫ್ ಎಕ್ಸಿಕುಟಿವ್ ಅಧಿಕಾರಿ ನೀಡಿದ್ದು ಮತ್ತು ಅವರಿಗೆ ಇರುವ ಒಟ್ಟು ನಿರ್ಧಾರ ಮಾಡಲು ಅಧಿಕಾರವಿರುವ ನಿರ್ಧಾರಗಳ ಸಂಖ್ಯೆ.
Differentiation: ಕಂಪನಿಯಲ್ಲಿರುವ ವಿವಿಧ ವಿಶೇಷತೆಗಳನ್ನು ಹೊಂದಿದ ವಿಭಾಗಗಳು ಅಥವಾ ವಿವಿಧ ಡಿಪಾರ್ಟ್ಮೆಂಟ್ ಗಳ ಮ್ಯಾನೇಜರ್ ಗಳ ನಡುವೆ ಇರುವ ಯೋಚನಾ ಲಹರಿಯ ಮತ್ತು ಭಾವನೆಗಳ ಭೇದ.
Formalization: ಒಬ್ಬ ಉದ್ಯೋಗಿಯ ಕಾರ್ಯದ ಹೊಣೆಗಾರಿಕೆಯನ್ನು ಔಪಚಾರಿಕ ದಾಖಲೆಯಲ್ಲಿ ಬರೆಯುವ ಗರಿಷ್ಟ ಮಟ್ಟ.
Integration: ಒಂದೆಡೆಗೆ ಕೇಂದ್ರವಾದ ಶ್ರಮವನ್ನು ಹೊಂದಲು ಅಥವಾ ಯೋಜನೆ ಅಥವಾ ಒಮ್ಮತದ ಅಭಿಪ್ರಾಯ ಹೇಳಲು ಡಿಪಾರ್ಟ್ಮೆಂಟ್ ಗಳ ನಡುವೆ ಇರುವ ಒಟ್ಟುಗೂಡಿ ಸಾಮರಸ್ಯದಿಂದ ಕೆಲಸ ಮಾಡುವ ಗುಣಮಟ್ಟ.
Professionalism: ಉದ್ಯೋಗಿಗಳು ಒಂದು ವೃತ್ತಿಪರ ಸಂಸ್ಥೆಯನ್ನು ಮಾನದಂಡವಾಗಿ ಎಷ್ಟು ಉಪಯೋಗಿಸಿಕೊಂಡು, ಸಾರ್ವಜನಿಕರಿಗೆ ಸೇವೆಯನ್ನು ನೀಡಬೇಕೆಂದು, ಸ್ವ ಶಿಷ್ಟಾಚಾರ ಪಾಲಿಸಬೇಕೆಂದು, ತತ್ಪರತೆ ಯನ್ನು ಒಂದು ಕಾರ್ಯದಲ್ಲಿ ಹೊಂದಿರಬೇಕೆಂದು ನಂಬಿರುವರೋ ಅದು.
Span of Control: ಪ್ರತ್ಯೇಕವಾಗಿ ಒಬ್ಬೊಬ್ಬ ಮ್ಯಾನೇಜರ್ ಹೊಂದಬಹುದಾದ ಮತ್ತು ಅಧಿಕಾರ ಚಲಾಯಿಸಬಹುದಾದ ಅವನ/ಳ ಕೆಳಗಿನ ಉದ್ಯೋಗಿಗಳು.
Specialization: ಔದ್ಯೋಗಿಕ ವಿಶೇಷತೆಗಳ ಸಂಖ್ಯೆ ಮತ್ತು ಅವುಗಳನ್ನು ತರಬೇತಿ ನೀಡಲು ಬೇಕಾಗುವ ಸಮಯ ಮತ್ತು ಗಹನತೆ ಅಥವಾ ಒಂದು ಉದ್ಯೋಗದ ವಿಶ್ಲೇಷಣೆಯಲ್ಲಿ ಒಂದು ಔದ್ಯೋಗಿಕ ವಿಶೇಷತೆಯ ಅಗತ್ಯತೆಯನ್ನು ಹೇಳಿರುವ ಆಳ.
Standardization: ಒಂದು ಕೆಲಸದಲ್ಲಿ ಸಹಿಸಬಹುದಾದ variables ಗಳ ಮಿತಿಗಳು.
Vertical Span: ಸಂಸ್ಥೆಯ ಕೆಳಗಿನ ಹಂತದಿಂದ ಮೇಲಿನ ಹಂತದ ವರೆಗೆ ವಿವಿಧ ಸ್ಥರಗಳಲ್ಲಿರುವ ಅಧಿಕಾರದ ಹಂತಗಳು.
ಇವುಗಳನ್ನು ನೋಡಿದಾಗ ಸಹಜವಾಗಿ ಇದೊಂದು ಬ್ರಹ್ಮ ವಿದ್ಯೆಯೆಂದು ಅನ್ನಿಸಿರಬಹುದು. ಆದರೆ ಉದ್ಯಮಗಳಲ್ಲಿನ ಅನುಭವ ಮತ್ತು ಸ್ವಲ್ಪ ವಿವರಣೆಯ ಮೂಲಕ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು. ಇದೆ ಪ್ರಯತ್ನವನ್ನು ನಾವು ಮುಂದಿನ ಅಂಕಣಗಳಲ್ಲಿ ಆಯಾಮಗಳ ಬಗ್ಗೆ ವಿವರಿಸುವ ಮೊದಲು ಮುಂದುವರಿಸುವೆವು.ಆದರೆ ಹೆಚ್ಚಿನ ಕಡೆಗಳಲ್ಲಿ ಎರಡು ಅಂಶಗಳನ್ನು ನಾವು ಒಟ್ಟು ಸೇರಿಸಿ ಮುಖ್ಯಾಂಶವನ್ನು ಗಮನಿಸಬೇಕು.
ಆಂಗ್ಲ ಅಂಕಣ:
http://somanagement.blogspot.com/2011/09/organization-theory-7.html
No comments:
Post a Comment