Saturday, October 1, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೩೭

ಹಿಂದಿನ ಅಂಕಣದಲ್ಲಿ ನಾವು CFS. ನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದೆವು. ಇಂದಿನ ಅಂಕಣದಲ್ಲಿ ಕೂಡ ಅದನ್ನೇ ಮುಂದುವರಿಸೋಣ. 

ಹಣದ ಹರಿವಿಕೆ ಕಾರ್ಯ ನಿರ್ವಹಣೆ, ಹೂಡಿಕೆ, ಆರ್ಥಿಕ ಇವು ಮೂರು ವಿಧವಾಗಿ ವಿಂಗಡಿಸಬಹುದೆಂದು ಅರಿತೆವು. ಇವುಗಳ ಪ್ರಮಾಣವು ಎಷ್ಟಿದೆ ಅನ್ನುವುದರಿಂದ ಕಂಪನಿಯು ಹೇಗೆ ನಡೆಯುತ್ತಿದೆ ಎಂಬುದು ಗೊತ್ತಾಗುವುದು. ಕಂಪನಿಯ ಕಾರ್ಯ ನಿರ್ವಹಣೆಯಿಂದಲೇ ದೊಡ್ಡ ಪ್ರಮಾಣದ ಹಣದ ಹರಿವು ಇದ್ದರೆ, ಕಂಪನಿಯ ಕೆಲಸ ಕಾರ್ಯಗಳು ಕಂಪನಿಗೆ ಸೂಕ್ತವಾದ ಹಣದ ಆದಾಯವನ್ನು ನೀಡುತ್ತಿದೆ ಮತ್ತು ಕಂಪನಿಗೆ ಅಗತ್ಯವಾದ ಹೊಸ ವಸ್ತುಗಳ ದಾಸ್ತಾನುಗಳನ್ನೂ ಹೊಂದಲು ಇದರಿಂದ ಸಾಧ್ಯವಿದೆ ಎಂದು. ಒಬ್ಬ ಹೂಡಿಕೆದಾರನು ಕಂಪನಿಯ ಹಣದ ಒಳ ಹರಿವು ಕಂಪನಿಯ ಮೇಲಿನ ಸಾಲ ಅಥವಾ ಬಾಕಿ ಸಂದಾಯಗಳನ್ನು ತೀರಿಸಲು ಆಗುವಷ್ಟು ಇರಬೇಕೆಂದು ಬಯಸುವನು.

ಇದರಲ್ಲಿ ಇನ್ನೊಂದು ಸೂಕ್ಷ್ಮವನ್ನು  ಅರಿಯಬೇಕೆನೆಂದರೆ, ಕೊನೆಯಲ್ಲಿ ಸಿಗುವ ಹಣದ ಹರಿವಿಕೆ ಹೆಚ್ಹಾಗಿ ಒಳ್ಳೆಯದಾಗಿ ಇರುವುದಿಲ್ಲ. ಇದು ಋಣಾತ್ಮಕ ವಾಗಿ ಕೂಡ ಇರಬಹುದು.

ಆದರೆ ಋಣಾತ್ಮಕ ವಾದ ಹಣದ ಹರಿವಿಕೆಯನ್ನು ಒಳ್ಳೆಯ ಲಕ್ಷಣವಲ್ಲ ಎಂದು ಕೇವಲ ಸಂಖ್ಯೆ ನೋಡಿ ಹೇಳಲಾಗದು. ಕಂಪನಿಯ ವಿಸ್ತರಿಸುವ ಯೋಜನೆಯಿಂದ ಕೂಡ ಋಣಾತ್ಮಕ ಹಣದ ಹರಿವು ಆಗಿರಬಹುದು, ಇದನ್ನು ಸರಿಯಾಗಿ ಗಮನಿಸಬೇಕು. ಅದು ಹಾಗಾಗಿದ್ದಲ್ಲಿ ಇದು ಕಂಪನಿಗೆ ಒಳಿತಾಗಿಯೇ ಇರುವುದು, ಏಕೆಂದರೆ ಹಣದ ಹರಿವು ಆಗಿರುವ ಕಾರಣ. ಹಾಗಾಗಿ ಹೂಡಿಕೆದಾರನು ಮೊದಲು ಹಣದ ಹರಿವಿಕೆ ಹೇಳಿಕೆಯನ್ನು ಕೂಲಂಕುಶವಾಗಿ ಗಮನಿಸುವ ಮೊದಲು ಯಾವುದೇ ನಿರ್ಧಾರಕ್ಕೆ ಬರಬಾರದು.

ಆಂಗ್ಲ ಅಂಕಣ:
http://somanagement.blogspot.com/2011/08/finance-and-management-37.html

No comments:

Post a Comment